December 14, 2024

Hampi times

Kannada News Portal from Vijayanagara

ಅಂಜನಾದ್ರಿಗೆ ರಾಜ್ಯಪಾಲ ಗೆಹ್ಲೋಟ್ ಭೇಟಿ

 

https://youtu.be/NHc6OMSu0K4?si=SI_K4goOPEgwo6h2

  1. ಅಂಜನಾದ್ರಿಗೆ ರಾಜ್ಯಪಾಲ ಗೆಹ್ಲೋಟ್ ಭೇಟಿ

ಕೊಪ್ಪಳ( ಗಂಗಾವತಿ): ಆಂಜನೇಯ ಜನಿಸಿದ ನಾಡು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್ ಗುರುವಾರ ಬೆಳಗ್ಗೆ ಭೇಟಿ ನೀಡಿ ದರ್ಶನ ಪಡೆದರು‌.

ಬೆಟ್ಟದ ಕೆಳಗಿನ ಆಂಜನೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇಲ್ಲಿಯೇ ಆಂಜನೇಯ ಜನಿಸಿದ್ದು ಕ್ಷೇತ್ರ ಅಭಿವೃದ್ಧಿಗೆ ಸರಕಾರ ಮುಂದಾಗಿದೆ. ಅಭಿವೃದ್ಧಿ ವಿಷಯವಾಗಿ ತಾವೂ ಸರಕಾರಕ್ಕೆ ಸೂಚನೆ ನೀಡುವುದಾಗಿ ತಿಳಿಸಿದರು.
ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಎಸಿ ಬಸವಣ್ಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಯು.ನಾಗರಾಜ, ಎಸ್ಪಿ ಅರುಣಾಂಗ್ಷು ಗಿರಿ ಇತರರು ರಾಜ್ಯಪಾಲರಿಗೆ ಸಾಥ್ ನೀಡಿದರು.
ಆಂಜನೇಯ ಫೋಟೋ ನೀಡಿದ ಪರಣ್ಣ ರಾಜ್ಯಪಾಲರನ್ನು ಸನ್ಮಾನಿಸಿದರು. ಜಿಲ್ಲಾಡಳಿತದಿಂದಲೂ ಸನ್ಮಾನಿಸಲಾಯಿತು.


ಪೂಜಾ ವಿವಾದ: ರಾಜ್ಯಪಾಲರು ಆಗಮಿಸುವ ಮುನ್ನ ಪೂಜೆ ಸಲ್ಲಿಸುವ ವಿಷಯವಾಗಿ ಮಹಾಂತ ವಿದ್ಯಾದಾಸ್ ಬಾಬಾ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ನ್ಯಾಯಾಲಯದ ಆದೇಶದಂತೆ ಪೂಜೆ ಸಲ್ಲಿಕೆಗೆ ಅವಕಾಶ ನೀಡುವಂತೆ ಬಾಬಾ ಆಗ್ರಹಿಸಿದರು. ರಾಜ್ಯಪಾಲರ ಭದ್ರತೆ ವಿಷಯದಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ಅವರು ಬಂದು ಹೋಗುವವರೆಗೂ ಪಕ್ಕದಲ್ಲಿರುವಂತೆ ಅಧಿಕಾರಿಗಳು ಸೂಚಿಸಿದರು.
ಇದನ್ನು ಖಂಡಿಸಿದ ಬಾಬಾ ಪೂಜಾ ಸ್ಥಳದಲ್ಲೇ ಪಟ್ಟು ಹಿಡಿದು ಕುಳಿತರು. ಬಳಿಕ ಪೊಲೀಸರು ಅವರನ್ನು ಬೇರೆಡೆ ಕರೆದೊಯ್ದರು. ಅಧಿಕಾರಿಗಳ ನಡೆ ಖಂಡಿಸಿ ಕೋರ್ಟ್ ಗೆ ನ್ಯಾಯಾಂಗ ನಿಂದನೆ ದೂರು ದಾಖಲಿಸುವುದಾಗಿ ಬಾಬಾ ಆಕ್ರೋಶ ವ್ಯಕ್ತಪಡಿಸಿದರು.

 

 

ಜಾಹೀರಾತು
error: Content is protected !!