https://youtu.be/NHc6OMSu0K4?si=SI_K4goOPEgwo6h2
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಭವ್ಯ ಮೆರವಣಿಗೆ
ಹಂಪಿಟೈಮ್ಸ್ ಹಗರಿಬೊಮ್ಮನಹಳ್ಳಿ :
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತೀಕೋತ್ಸವ ನಿಮಿತ್ತ ಶ್ರೀ ಗುರುಮಾಲಾ ವೃಂದದಿಂದ ಗುರು ಕೊಟ್ಟೂರೇಶ್ವರ ಸ್ವಾಮಿ ಭವ್ಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪತ್ರಿಬಸವೇಶ್ವರ ದೇವಾಲಯದಿಂದ ಬಸವೇಶ್ವರ ವೃತ್ತದ ಮೂಲಕ ಸ್ವಾಮಿ ಮೆರವಣಿಗೆಯಲ್ಲಿ ಸಮಾಳ ನಂದಿಕೋಲುಗಳ ವಾದ್ಯಮೇಳ ಮೆರಗು ನೀಡುವಂತಿತ್ತು.
ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಭಕ್ತರು ಸ್ವಾಮಿಗೆ ಫಲಪುಷ್ಪ ಅರ್ಪಿಸಿ ಕೃತಾರ್ಥರಾದರು. ಇಲ್ಲಿನ ಹಗರಿ ಅಂಜನೇಯ ದೇವಾಲಯದ ಬಳಿ ಮೆರವಣಿಗೆ ಸಂಪನ್ನಗೊಳಿಸಿದರು. ದಾರಿಯುದಕ್ಕೂ “ಕೊಟ್ಟೂರು ದೊರೆಯೆ ನಿನಗಾರು ಸರಿಯೆ” ಎಂಬ ಘೋಷಣೆ ಕೂಗಿ ಭಕ್ತಿಭಾವ ಮೆರೆದರು. ಇದಕ್ಕೂ ಮುನ್ನ ನಡೆದ ಹರಾಜಿನಲ್ಲಿ ಪಟ್ಟಣದ ಎ.ಎಂ.ಪ್ರಕಾಶ್ 35,001 ರೂಗೆ ಗುರು ಕೊಟ್ಟೂರೇಶ್ವರ ಸ್ವಾಮಿ ಪಟಾಕ್ಷಿಪಡೆದರು.
ಗುರು ಮಾಲಾವೃಂದದ ಕಡ್ಲಬಾಳು ಕೊಟ್ರೇಶ, ಎಂ.ಪಿ.ಎಂ.ಮಂಜುನಾಥ, ಅಕ್ಕಿ ಚಂದ್ರಶೇಖರ್, ಅಕ್ಕಿ ಮಲ್ಲಿಕಾರ್ಜುನ, ಅಕ್ಕಿ ಮೃತ್ಯುಂಜಯ, ಪಿಗ್ಮಿ ಮಂಜುನಾಥ, ಶಿವಕುಮಾರ್, ಕಿರಾಣಿ ಕೊಟ್ರೇಶ, ಎ.ಎಂ.ಪೂರ್ಣಯ್ಯ, ಶ್ರೀಧರ, ಬಾಳೆಕಾಯಿ ಸಿದ್ದೇಶ,ನಾಗರಾಜ, ಪುನೀತ್, ನೆಲ್ಕುದ್ರಿಪತ್ರೆಪ್ಪ, ಬಿ.ಶಿವಣ್ಣ, ಗುರುಸಿದ್ದಯ್ಯ,ಕೊಟ್ರೇಶ, ದಯಾನಂದ, ಬಣಕಾರ ಗುರು, ಹನುಮಂತಪ್ಪ, ವೈ.ಗುರುಬಸವರಾಜ, ಅಭಿಷೇಕ, ಬಣಕಾರ ನಾಗರಾಜ, ಗುರುಬಸವರಾಜ, ಚಿನ್ನಾಪುರಿ, ಉಮೇಶ, ಬಸವರಾಜಪ್ಪ ಇತರರಿದ್ದರು. ಕೆವಿಒಆರ್ ಕಾಲೋನಿ ತಾಯಂದಿರು ಮತ್ತು ಕೊಟ್ಟೂರೇಶ್ವರ ಸ್ವಾಮಿ ಮಹಿಳಾ ಭಕ್ತವೃಂದ ಕಳಸದೊಂದಿಗೆ ಪಾಲ್ಗೊಂಡಿದ್ದರು.
– ಗುರುಮಾಲಾಧರಾಣೆಯಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ. ಕೊಡುಗೈ ದೊರೆ ಕೊಟ್ಟೂರೇಶ್ವರ ಸ್ವಾಮಿ ಮಾಲಾಧಾರಿಗಳ ಸಂಕಲ್ಪವನ್ನು ನಿಶ್ಚಿತವಾಗಿ ಈಡೇರಿಸುತ್ತಾನೆ “
* ಎಂ.ಪಿ.ಎಂ.ಮಂಜುನಾಥ, ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಮಾಲಾವೃಂದ. ಹಗರಿಬೊಮ್ಮನಹಳ್ಳಿ
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ