https://youtu.be/NHc6OMSu0K4?si=SI_K4goOPEgwo6h2
ವೈದ್ಯಕೀಯ, ಸಾಹಿತ್ಯ, ಸಮಾಜ ಸೇವೆಗೆ ಒಲಿದ ನಾಡೋಜ ಗೌರವ
ಹಂಪಿಟೈಮ್ಸ್
ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ಮಂದಿರಲ್ಲಿ ಗುರುವಾರ ಸಂಜೆ ಜರುಗಿದ ಕನ್ನಡ ವಿವಿ 31 ನುಡಿಹಬ್ಬದಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಹಿರಿಯ ಸಾಹಿತಿ ಕೃಷ್ಣಪ್ಪ ಜಿ. ಹಾಗೂ ಬರಹಗಾರ ಎಸ್. ಷಡಕ್ಷರಿ ಅವರಿಗೆ ರಾಜ್ಯಾಪಾಲ ಥಾವರಚಂದ್ ಗೆಹಲೋತ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು.
ಸಾಹಿತಿ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಘಟಿಕೋತ್ಸವ ಭಾಷಣ ಮಾಡಿದರು.ಹಾಸನ ಮೂಲದ ಡಾ.ಸಿ.ಎನ್. ಮಂಜುನಾಥ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ, ಸಾಹಿತ್ಯ ಕೃಷಿ ಗುರುತಿಸಿ ಬೆಂಗಳೂರಿನ ಕೃಷ್ಣಪ್ಪ ಜಿ. ಅವರಿಗೆ ಮತ್ತು ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಬರಹಗಾರರಾದ ಚಿಕ್ಕಬಳ್ಳಾಪುರ ಜಿಲ್ಲೆ ತುಳವನೂರು ಗ್ರಾಮದ ಎಸ್. ಷಡಕ್ಷರಿ ಸೇರಿ ಮೂವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಯಿತು.
ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಡೀನರು ಇದ್ದರು. ಇದೇ ಸಂದರ್ಭದಲ್ಲಿ ಪಿಎಚ್ ಡಿ, ಡಿ.ಲಿಟ್, ಎಂ.ಎ.ಪಿಎಚ್ .ಡಿ. ಪದವಿ ಪ್ರದಾನ ಮಾಡಲಾಯಿತು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ