July 17, 2025

Hampi times

Kannada News Portal from Vijayanagara

ಮಾತಾ ಮಂಜಮ್ಮ ಜೋಗತಿ ರಾಜಕೀಯ ಪ್ರವೇಶ? | ಕುತೂಹಲ ಬಿಚ್ಚಿಟ್ಟ ಮಹಾನ್ ಕಲಾವಿದೆ

https://youtu.be/NHc6OMSu0K4?si=SI_K4goOPEgwo6h2

 

HAMPI TIMES

ಹೊಸಪೇಟೆ: ಯಾವುದೇ ಅಧಿಕಾರಕ್ಕಾಗಲಿ, ರಾಜಕೀಯ ಕ್ಷೇತ್ರದಲ್ಲಿರಬೇಕು ಎಂದಾಗಲಿ ಆಸೆ ಪಟ್ಟಿಲ್ಲ. ನನ್ನ ಸುದೀರ್ಘ ಸೇವೆಯನ್ನು ಪರಿಗಣಿಸಿ ಅಧಿಕಾರ, ಪ್ರಶಸ್ತಿಗಳು ನನ್ನನ್ನು ಹುಡುಕಿಕೊಂಡು ಬಂದಿವೆ. ರಾಜಕೀಯ ಕ್ಷೇತ್ರವು ತಾನಾಗಿಯೇ ಬಂದ್ರೆ ನೋಡೋಣ ಎಂದು ಪದ್ಮಶ್ರಿ ಮಾತಾ ಮಂಜಮ್ಮ ಜೋಗತಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಾನಪದ ಅಕಾಡೆಮಿ ಅಧ್ಯಕ್ಷೆ ಸ್ಥಾನದಲ್ಲಿ ಸರ್ಕಾರ ನನ್ನನ್ನು ಇನ್ನೂ ಕೆಲ ತಿಂಗಳು ಮುಂದುವರಿಸಿದಿದ್ದಲ್ಲಿ ನನ್ನ ಕನಸಿನ ಕೆಲ ಬೃಹತ್ ಯೋಜನೆಗಳಾದ ಅಖಿಲ ಭಾರತ ಮಹಿಳಾ ಸಮ್ಮೇಳನ, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಹಾಗೂ ತೃತೀಯ ಲಿಂಗಗಳ ಉತ್ಸವವನ್ನು ಮಾಡುತ್ತಿದ್ದೆ. ನನ್ನ ಅಧಿಕಾರವಧಿಯಲ್ಲಿ ಕರೋನಾ ಎದುರಾಗಿದ್ದರಿಂದ ಅನುದಾನಕ್ಕೂ ಕೊಕ್ಕೆ ಬಿತ್ತು. ಕರೊನಾ ನಂತರದ ಅವಧಿಯಲ್ಲಿ ಅನುದಾನ ಕಡಿತಗೊಂಡಿದ್ದು, 31 ಜಿಲ್ಲೆಗೆ 60 ಲಕ್ಷ ರೂ ನೀಡಿದ್ದರಿಂದ ಅನೇಕ ಯೋಜನೆಗಳು ಕನಸಾಗಿಯೆ ಉಳಿದವು. 20 ಲಕ್ಷ ರೂ ಅಕಾಡೆಮಿ ಖರ್ಚುವೆಚ್ಚಗಳಿವೆ. 20 ಲಕ್ಷ ರೂ ಪ್ರಶಸ್ತಿ ಪುರಸ್ಕಾರಕ್ಕೆ ಮೀಸಲಿಡಬೇಕಾಗುತ್ತದೆ. ಇನ್ನುಳಿದ 20 ಲಕ್ಷ ರೂಗಳಲ್ಲಿ 31 ಜಿಲ್ಲೆಗೆ ಹಂಚಿಕೆ ಮಾಡಿ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದು ಸಾಧ್ಯವೆ? ಹಾಗಾಗಿ ನಿರೀಕ್ಷೆಗೆ ತಕ್ಕಷ್ಟು ಕಾರ್ಯನಿರ್ವಹಿಸಲಾಗಿಲ್ಲ. ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ ಎರಡು ತಿಂಗಳಿಂದ ಖಾಲಿ ಇದೆ. ಮುಂದೆ ಅಧ್ಯಕ್ಷರಾಗಿ ಬರುವವರು ಜನಪರ ಕೆಲಸಗಳನ್ನು ಮಾಡುತ್ತಾರೆ ಎಂಬ ಭರವಸೆ ಇದೆ. ಸರ್ಕಾರ ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡಿ ಕಾರ್ಯಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು ಎಂದರು.

ಹಂಪಿ ಉತ್ಸವದ ರೂವಾರಿ ಎಂ.ಪಿ.ಪ್ರಕಾಶ  ನಿಗದಿಗೊಳಿಸಿದ್ದ ನವೆಂಬರ್ 3,4,5 ರಂದೆ ಹಂಪಿ ಉತ್ಸವ ಜರುಗಿದರೆ ಎಲ್ಲರಿಗೂ ಅನುಕೂಲ. ಸರ್ಕಾರ ಪ್ರತಿ ವರ್ಷ ಉತ್ಸವದ ದಿನಾಂಕ ನಿಗದಿಗೊಳಿಸುವುದಕ್ಕಿಂತ, ಸ್ಪಷ್ಟ ದಿನಾಂಕ ಘೋಷಿಸಿ ಆ ದಿನಗಳಲ್ಲೆ ಆಚರಣೆಗೆ ಅವಕಾಶ ಕಲ್ಪಿಸಬೇಕು ಎಂದರು.

 

ಈ ಸುದ್ದಿಯನ್ನು ವಿಡಿಯೋದಲ್ಲಿ ನೋಡಲು ನಮ್ಮ ಯುಟ್ಯೂಬ್ ಚಾನಲ್ ಕ್ಲಿಕ್ ಮಾಡಿ

 

ಜಾಹೀರಾತು
error: Content is protected !!