November 11, 2024

Hampi times

Kannada News Portal from Vijayanagara

ಕ್ರೀಯಾಶೀಲತೆ ಹೆಚ್ಚಳಕ್ಕೆ ಸ್ಪರ್ಧೆಗಳು ಸಹಕಾರಿ : ಗೀತಾ ಭೀಮಾನಾಯ್ಕ್

 

https://youtu.be/NHc6OMSu0K4?si=SI_K4goOPEgwo6h2

 

HAMPI TIMES

ಹೊಸಪೇಟೆ: ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ತಮ್ಮೊಳಗಿನ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವುದರೊಂದಿಗೆ ಮಾನಸಿಕ ಒತ್ತಡದಿಂದಲೂ ಮುಕ್ತರಾಗಬಹುದು ಎಂದು ಸಮಾಜ ಸೇವಕಿ ಗೀತಾ ಭೀಮಾನಾಯ್ಕ್ ಹೇಳಿದರು.

ತಾಲೂಕಿನ ಡಣನಾಯಕನಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಂಕ್ರಾತಿ ಸೊಬಗು ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮನೆಗೆಲಸ, ಕಚೇರಿ ಕೆಲಸಗಳು ಸೇರಿದಂತೆ ಕೃಷಿ ಕಾರ್ಮಿಕರಾಗಿಯೂ ಬಿಡುವಿಲ್ಲದಂತೆ ದುಡಿಯುತ್ತಿರುವ ಮಹಿಳೆಯರು ನಾನಾ ಒತ್ತಡಗಳಿಗೆ ಸಿಲುಕುತ್ತಾರೆ. ಸ್ಪರ್ಧೆಗಳು ಮಾನಸಿಕ ಒತ್ತಡದಿಂದ ಹೊರಬರಲು ಮತ್ತು ತಮ್ಮೊಳಗಿನ ಸುಖ ದುಃಖಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗುತ್ತವೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ನಡುವೆ ಸ್ನೇಹ ಹೆಚ್ಚುತ್ತದೆ. ಮಹಿಳೆಯರು ತಮ್ಮ ನಿತ್ಯದ ಬದುಕಿನ ನಡುವೆ ಅಲ್ಪ ಸಮಯವನ್ನಾದರೂ ಬಿಡುವು ಮಾಡಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.ಡಣನಾಯಕನಕೆರೆ ಗ್ರಾ.ಪಂ ಸದಸ್ಯ ಉಪ್ಪಾರ ಸೋಮಪ್ಪ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ ದೊರೆತಾಗ ಮಹಿಳೆಯರ ಮೇಲಿನ ದೌರ್ಜನ್ಯಗಳು ತಗ್ಗುತ್ತವೆ. ಶಿಕ್ಷಣದಿಂದ ಮೌಢ್ಯತೆಗಳನ್ನು ಹೋಗಲಾಡಿಸಲು ಸಾಧ್ಯ. ಪೋಷಕರು ಹೆಣ್ಣುಮಕ್ಕಳಿಗೆ ಪೂರ್ಣಪ್ರಮಾಣದ ಶಿಕ್ಷಣ ದೊರಕಿಸಿಕೊಡಬೇಕು ಎಂದರು.


ಡಣನಾಯಕನಕೆರೆ ಗ್ರಾಮ ಪಂಚಾಯುತಿ ವ್ಯಾಪ್ತಿಯ ನಾಲ್ಕು ಹಳ್ಳಿಗಳಿಂದ ೫೯ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಮಮತ.ಈ (ಪ್ರಥಮ), ಸವಿತ.ಎಮ್ (ದ್ವಿತೀಯ), ಶೀಲ್ಪಾ.ಎಂ (ತೃತೀಯ) ಬಹುಮಾನ ಗಳಿಸಿದರು. ಭಾಗವಹಸಿದ ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಪ.ಪಂ ಮಾಜಿ ಅಧ್ಯಕ್ಷೆ ಕವಿತಾ ವಿಜಯಕುಮಾರ, ಹಾಲ್ದಳ್ ನಾಗರತ್ನ, ಸುನಂದ, ಯಶೋಧ ಮಂಜುನಾಥ್, ಮಂಜುಳ, ಗೋಪಿಕಾ ಆನಂದ, ಸಾಮಾಜಿಕ ಜಾಲ ತಾಣದ ಯುವ ಕಾರ್ಯದರ್ಶಿ ಸವಿತಾ, ಯುವನಾಯಕ ಶರತ್, ಗ್ರಾಪಂ ಸದಸ್ಯರಾದ ಸೋಮಣ್ಣ, ಪರಶುರಾಮ, ರಮೇಶ್, ವೆಂಕಟೇಶ್ ಹಾಗೂ ಮುಖಂಡರಾದ ದ್ಯಾಮಜ್ಜ, ಅನುಸೂಯಮ್ಮ, ಗ್ರಾಮದ ಮುಖಂಡರಾದ ಪ್ರವೀಣ್ ಕುಮಾರಪ್ಪ ಹಾಗೂ ಇನ್ನಿತರರಿದ್ದರು.

 

 

ಜಾಹೀರಾತು
error: Content is protected !!