December 14, 2024

Hampi times

Kannada News Portal from Vijayanagara

ಅನುದಾನವಿದ್ದರೂ ಅಭಿವೃದ್ಧಿ ತಡವೇಕೆ? ಹಳ್ಳಿಗಳಲ್ಲಿ ಸಕಲ ಸೌಲಭ್ಯ ಕಲ್ಪಿಸಿ: ಸಂಸದ ವೈ.ದೇವೆಂದ್ರಪ್ಪ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸಂಸದ ವೈ ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಜಿಪಂ ವಿಜಯನಗರ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಜಿಲ್ಲಾಮಟ್ಟದ ದಿಶಾ ಸಮಿತಿ ಎರಡನೇ ತ್ರೈಮಾಸಿಕ ಸಭೆ ನಡಯುತ್ತಿದೆ.

ದಿಶಾ ಸಮಿತಿ ಸಭೆಯ ಅನುಪಾಲನಾ ವರದಿ,  ಡೇ ನಲ್ಮ್, ಪಿಎಂ, ಸ್ವನಿಧಿ, ಪಿ.ಎಂ.ಎಫ್.ಎಂ.ಇ ಕೌಸದಲ್ಯಾಭಿವೃದ್ಧಿ,  ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ, ಉದ್ಯೋಗಖಾತ್ರಿ ಯೋಜನೆ, ಜಲಜೀವನ್ ಮಿಷನ್, ಸೇರಿದಂತೆ 34  ವಿಷಯಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.

ಸರ್ಕಾರದ ಜನಪರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಅಭಿವೃದ್ಧಿ ವರದಿ ಕಾಗದಕ್ಕೆ ಸೀಮಿತಗೊಳ್ಳದಿರಲಿ. ಗುಣಮಟ್ಟದ ಕಾಮಗಾರಿಗಳು ನಡೆಯಬೇಕು. ಕಳಪೆ ದೂರುಗಳು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು.ಹಳ್ಳಿಗಳಲ್ಲಿ ಸಕಲ ಸೌಲಭ್ಯಗಳು ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.

ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾಧಿಕಾರಿ ಟಿ.ವೆಂಕಟೇಶ, ಎಸ್ಪಿ ಶ್ರೀಹರಿಬಾಬು,ಡಿಸಿಎಫ್  ಹೆಚ್.ಸಿ. ಗಿರೀಶ್ ಉಪಸ್ಥಿತರಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ವರದಿ ಒಪ್ಪಿಸಿದರು.

 

 

 

ಜಾಹೀರಾತು
error: Content is protected !!