March 15, 2025

Hampi times

Kannada News Portal from Vijayanagara

ಭೇದ ಭಾವ ಎಣಿಸದೆ ಸಮಾನವಾಗಿ ಕಾಣಿ: ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಹೇಳಿಕೆ

 

https://youtu.be/NHc6OMSu0K4?si=SI_K4goOPEgwo6h2

 

HAMPI TIMES
ಹೊಸಪೇಟೆ: ಯಾರಲ್ಲೂ ಭೇದ ಭಾವ ಎಣಿಸದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಈ ಬಾರಿಯ ಸಮಾನಗೊಳಿಸು ಘೋಷವಾಕ್ಯವನ್ನು ಅನುಷ್ಠಾನಕ್ಕೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಹೇಳಿದರು.


ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಡಿ.1 ಗುರುವಾರ ಹಮ್ಮಿಕೊಂಡಿದ್ದ ವಿಶ್ವಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಏಡ್ಸ್ ಎಂದಾಕ್ಷಣ ಭಯ ಬೀಳದೆ ಅದನ್ನು ನಿಯಂತ್ರಿಸುವ ಬಗೆ ಹೇಗೆ ಎಂಬುದನ್ನು ಅರಿತು, ಸೂಕ್ತ ಚಿಕಿತ್ಸೆಯೊಂದಿಗೆ ಜೀವನ ನಡೆಸಿದಾಗ ಬದುಕಲ್ಲಿ ನೆಮ್ಮದಿ ಕಾಣಬಹುದು. ಅನೇಕರಲ್ಲಿ ಏಡ್ಸ್ ಬಗ್ಗೆ ತಪ್ಪು ತಿಳಿವಳಿಕೆ ಇದ್ದು, ಅರಿವು ಮೂಡಿಸುವ ಮೂಲಕ ಜನರನ್ನು ಜಾಗೃತಿಗೊಳಿಸಬೇಕಿದೆ. ಡಿಸೆಂಬರ್ ಮಾಸಪೂರ್ಣ ಜಾತ್ರೆ, ಸಂತೆ, ಸ್ವಸಹಾಯ ಸಂಘಗಳು, ಶಾಲಾ ಕಾಲೇಜುಗಳಲ್ಲಿ ವಿವಿಧ ಐ.ಇ.ಸಿ ಕಾರ್ಯಕ್ರಮಗಳ ಮೂಲಕ ಏಡ್ಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.


ಡಿಎಚ್‌ಒ ಡಾ.ಸಲೀಂ ಎನ್ ಮಾತನಾಡಿ, ಜಿಲ್ಲೆಯಲ್ಲಿ 2017 ರಿಂದ ಅಕ್ಟೋಬರ್ 2022 ರವರೆಗೆ 442237 ಜನರಿಗೆ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆ ನಡೆಸಿ, ರಕ್ತ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1502 ಜನರಿಗೆ ಹೆಚ್.ಐ.ವಿ ಸೋಂಕು ಇರುವುದು ದೃಢಪಟ್ಟಿದೆ. ಹೆಚ್‌ಐವಿ ಸೋಂಕಿಗೆ ಒಳಗಾಗುವ ಹೆಚ್ಚು ಅಪಾಯದ ಅಂಚಿನಲ್ಲಿರುವ ಮತ್ತು ಸಮಾಜದಿಂದ ಉಪೇಕ್ಷಿತವಾಗಿರುವ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರು, ಸಲಿಂಗಕಾಮಿ ಪುರುಷರು, ವಲಸೆ ಹೋಗುವವರು, ಲೈಂಗಿಕ ಸೋಂಕಿಗೆ ಒಳಗಾಗಿರುವವರು, ಇತರರನ್ನು ಗುರುತಿಸಿ ಅವರಿಗೆ ನಿರ್ದಿಷ್ಟವಾಗಿ ಗಮನ ಹರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಎಚ್.ಐ.ವಿ ಸೋಂಕಿತರಿಗೆ ಸೇವೆ ಸಲ್ಲಿಸಿದ ವೈದ್ಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾ ಕ್ಷಯ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಜಗದೀಶ ಪಾಟ್ನೆ, ರೋಟರಿ ಕ್ಲಬ್ ಕಾರ್ಯದಶಿ ಸತ್ಯನಾರಾಯಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಉಪಸ್ಥಿತರಿದ್ದರು.

ಜಾಗೃತಿ ಜಾಥಾ: ಇದಕ್ಕೂ ಮುನ್ನ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ನ್ಯಾಯಧೀಶರಾದ ಆನಂದ ಚೌವ್ಹಾಣ ಮತ್ತು ನಗರಸಭೆ ಅಧ್ಯಕ್ಷೆ ಸುಂಕಮ್ಮ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಡಿ.ಎಚ್.ಒ ಕಚೇರಿಯಿಂದ ಆರಂಭಗೊAಡು ಡಾ.ಪುನೀತ್ ರಾಜಕುಮಾರ ಸರ್ಕಲ್ ಮೂಲಕ ರೋಟರ್ ಕ್ಲಬ್ ಸಭಾಂಗಣಕ್ಕೆ ತಲುಪಿತು. ಜಾಥದಲ್ಲಿ ಟಿಎಂಇಒ ನಸಿಂಗ್ ವಿದ್ಯಾರ್ಥಿಗಳು, ತುಂಗಭದ್ರಾ ನರ್ಸಿಂಗ್ ಕಾಲೇಜ್, ಮಲ್ಲಿಗೆ ನರ್ಸಿಂಗ್ ಕಾಲೇಜ್, ಎಚ್.ಐ.ವಿ.ಸೋಂಕಿತರ ಸಂಘದ ಪದಾಧಿಕಾರಿಗಳು, ವಿದೇಶಿ ಕಲಾತಂಡ, ಡಾ.ಶಂಕರನಾಯ್ಕ, ಡಾ.ಷಣ್ಮುಖ ನಾಯ್ಕ, ಡಾ.ಜಂಬಯ್ಯ ಆರ್‌ಸಿಎಚ್‌ಒ, ಡಾ.ಎಂ.ಧರ್ಮನಗೌಡ, ಡಿ.ಎಂ. ಡಾ.ಕಮಲಮ್ಮ ಇತರರು ಇದ್ದರು.

 

 

ಜಾಹೀರಾತು
error: Content is protected !!