December 14, 2024

Hampi times

Kannada News Portal from Vijayanagara

ಪಾಂಡಿತ್ಯ ಮೆರೆದ ಕಂದನ ಕಾಲಿಗೆ ನಮಿಸಿದ ಸಚಿವ ಆನಂದಸಿಂಗ್

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ಕನ್ನಡ ಪ್ರೇಮ, ಕಾಳಜಿ ಹಾಗೂ ನಾಲ್ಕೇ ನಿಮಿಷದಲ್ಲಿ ಕನ್ನಡದ ಇತಿಹಾಸ ಕುರಿತು ತನ್ನ ಮುದ್ದು ನುಡಿಗಳಲ್ಲಿ ಹೇಳಿ ನೆರೆದವರನ್ನೆಲ್ಲ ಮಂತ್ರಮುಗ್ಧರನ್ನಾಗಿಸಿದ ಒಂದನೇ ತರಗತಿಯ ಅಂಧ ವಿದ್ಯಾರ್ಥಿ ಅಭಿನವ ಬಾಲಕನ ಪಾದಕ್ಕೆ ಪ್ರವಾಸೋಧ್ಯಮ ಸಚಿವ ಆನಂದಸಿಂಗ್ ನಮಿಸಿ, ಸನ್ಮಾನಿಸಿ ಕಂದನಲ್ಲಿನ ಪ್ರತಿಭೆಯನ್ನು ಗೌರವಿಸಿದರು.


ಹೌದು, ಕನ್ನಡ ರಾಜ್ಯೋತ್ಸವದಂಗವಾಗಿ ನಗರದ ಡಾ.ಪುನೀತ್‌ರಾಜಕುಮಾರ್ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನ.27, ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ 35*40 ಚ.ಅಡಿಯ 115 ಕೆಜಿಯ ಕನ್ನಡ ಭಾವುಟ ಧ್ವಜಾರೋಹಣ ಸಂದರ್ಭದಲ್ಲಿ ಪುಟ್ಟ ಅಂಧ ಬಾಲಕ ಅಭಿನವ ಕನ್ನಡಕ್ಕಾಗಿ ಕಟಿಬದ್ಧರಾಗಿ ಹೋರಾಟ ನಡೆಸಿ, ಕನ್ನಡವನ್ನೆ ಉಸಿರಾಗಿಸಿಕೊಂಡು ಕನ್ನಡ ಕಟ್ಟಿ ರಕ್ಷಿಸಿದ ಹಿರಿಯ ನಾಯಕರ, ಜ್ಞಾನಪೀಠ ಪ್ರಶಸ್ತಿ ಪುರಷ್ಕೃತರ, ಕವಿಗಳ, ಮುಖ್ಯಮಂತ್ರಿಗಳ ಹೆಸರುಗಳು ಕಂದನ ಬಾಯಲ್ಲಿ ಮುತ್ತುರತ್ನಗಳಂತೆ ಪದಗಳು ಹೊರಬರುತ್ತಿದ್ದನ್ನು ಕಂಡು, ಕುತೂಹಲದಿಂದ ಹಸನ್ಮುಖಿಯೊಂದಿಗೆ ಬಾಲಕನನ್ನೇ ನೋಡುತ್ತಿದ್ದ ಸಚಿವ ಆನಂದಸಿAಗ್ ಕೆಲಕ್ಷಣ ರೋಮಾಂಚನಗೊಳಗಾದರು. ಬಾಲಕ ಭಾಷಣ ಮುಗಿಸುತ್ತಿದ್ದಂತೆ ಆತನ ಪಾದಕ್ಕೆ ನಮಸ್ಕರಿಸಿ ಮುಗುವಿನಲ್ಲಿನ ಅಗಾಧ ಕನ್ನಡಪರ ಕಾಳಜಿ, ಜ್ಞಾನ, ಸ್ಮರಣಶಕ್ತಿಯನ್ನು ಕೊಂಡಾಡಿ ಮುದ್ದಾಡಿದರು.


ಸಚಿವ ಆನಂದಸಿAಗ್ ಮಾತನಾಡಿ, ನಾಡಿನ ನೆಲ, ಜಲ, ಭಾಷೆ ಸಂಬAಧಿಸಿದAತೆ ಸಮಸ್ಯೆಗಳು ಎದುರಾದಾಗ ಕನ್ನಡಪರ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕು. ಅನೇಕರು ಕನ್ನಡಕ್ಕಾಗಿ ತಮ್ಮ ಉಸಿರು ಚೆಲ್ಲಿದ್ದಾರೆ. ಕನ್ನಡ ನಾಡಲ್ಲಿ ಅದರಲ್ಲೂ ಗಂಡು ಮೆಟ್ಟಿದ ವಿಜಯನಗರ ಸಾಮ್ರಾಜ್ಯದ ನೆಲದಲ್ಲಿ ನಾವಿರುವುದು ನಮ್ಮ ಸೌಭಾಗ್ಯವೇ ಸರಿ. ಕನ್ನಡದ ಬಗೆಗೆ ಮತ್ತು ಕವಿಗಳು ರಚಿಸಿದ ಗೀತೆಗಳನ್ನು ಕೇಳಿದರೆ ರೋಮಾಂಚನೆಗೊಳ್ಳುತ್ತದೆ. ಗುರಿ ಸಾಧನೆಗೆ ಹಿಂಜರಿಕೆಯೆ ಅಡ್ಡಿಯಾಗಿದ್ದು, ಹಿಂಜರಿಕೆ ಬಿಟ್ಟು ಪ್ರತಿಯೊಬ್ಬರಲ್ಲಿರುವ ಪ್ರತಿಭೆಯನ್ನು ಹೊರಹಾಕಿದಾಗ ಜಗತ್ತಿಗೆ ಆ ವ್ಯಕ್ತಿ ಪರಿಚಿತನಾಗುತ್ತಾನೆ. ಪ್ರತಿಭಾವಂತರಿಗೆ ಅವಕಾಶ ಬಂದಾಗ ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದರು.


ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಹುಡಾ ಅಧ್ಯಕ್ಷ ಅಶೋಕಜೀರೆ, ನಗರಸಭೆ ಸದಸ್ಯರಾದ ರಮೇಶ ಗುಪ್ತ, ರೂಪೇಶ, ಜೀವರತ್ನ, ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಎನ್.ವೆಂಕಟೇಶ, ಸಂದೀಪ್‌ಸಿAಗ್, ಸಿದ್ದಾರ್ಥಸಿಂಗ್, ಧರ್ಮೇಂದ್ರಸಿAಗ್, ತಾರಿಹಳ್ಳಿ ಹನುಮಂತಪ್ಪ, ಸಾಲಿಸಿದ್ದಯ್ಯಸ್ವಾಮಿ, ನಾಯಕರ ಹುಲುಗಪ್ಪ, ಉಮಾಮಹೇಶ್ವರ, ಡಾ.ಕನಕೇಶಮೂರ್ತಿ, ಜಂಬುನಾಥ, ಪ್ರವೀಣ್ ರಾಜಪುರೋಹಿತ, ಗುಜ್ಜಲ ಗಣೇಶ, ಬೋಡಾ ರಾಮಪ್ಪ, ಪರಮೇಶ್ವರ ಗೌಡ ಸೇರಿದಂತೆ ಅನೇಕರು ಇದ್ದರು.  ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಉಪ್ಪಿನ ಹನುಮಂತಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಗುಂಡಿ ರಮೇಶ, ರಾಷ್ಟçಪತಿ ಪದಕ ಪುರಸ್ಕೃತ ಎಸ್.ಎಂ.ಗಿರೀಶರನ್ನು ಸನ್ಮಾನಿಸಲಾಯಿತು.

ಅಂಜಲಿ ಭರತನಾಟ್ಯ ಕಲಾ ಕೇಂದ್ರದ ಮಕ್ಕಳು ನೃತ್ಯ ಪ್ರದರ್ಶಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಡಾ.ಯತ್ನಳ್ಳಿ ಮಲ್ಲಯ್ಯ, ಮಧುರಚನ್ನಶಾಸ್ತಿç, ಎನ್.ವೆಂಕಟೇಶ ನಿರ್ವಹಿಸಿದರು.

 

ಚಿತ್ರಗಳು: ಎಸ್.ಎಸ್.ರಾಚಯ್ಯ

 

 

ಜಾಹೀರಾತು
error: Content is protected !!