https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ನಗರದ ಡ್ಯಾಂ ರಸ್ತೆಯಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಿದ್ದ ಪುತ್ಪಾತ್ ಮಾರ್ಗದಲ್ಲಿ ಕೆಲ ಪ್ರಭಾವಿಗಳು ಭದ್ರವಾಗಿ ನಿರ್ಮಿಸಿಕೊಂಡಿದ್ದ ಗೂಡಂಗಡಿಗಳನ್ನು ಶನಿವಾರ ಬೆಳಿಗ್ಗೆ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವು ಗೊಳಿಸಿದರು.
ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿ ತಡೆಗೋಡೆ ಪಕ್ಕದಲ್ಲಿ ಪಾದಚಾರಿಗಳಿಗಾಗಿ ಪುಟ್ಪಾತ್ ನಿರ್ಮಿಸಲಾಗಿತ್ತು. ಪುಟ್ಪಾತ್ ಮಾರ್ಗವೂ ರಸ್ತೆಯುದ್ದಕ್ಕೂ ಇಲ್ಲದ್ದರಿಂದ ಪಾದಚಾರಿ ಮಾರ್ಗ ಸಮರ್ಪಕ ಬಳಕೆಗೆ ಮುಕ್ತವಾಗಿರಲಿಲ್ಲ. ಕೆಲ ಪ್ರಭಾವಿಗಳು ಕಬ್ಬಿಣದ ಸರಳು, ಸೀಟ್ ಬಳಸಿ ಪುಟ್ಪಾತ್ ಮೇಲೆಯೆ ಗೂಡಂಗಡಿ ನಿರ್ಮಿಸಿಕೊಂಡಿರಿವುದು ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದರಿಂದ ಗೂಡಂಗಡಿ ನಡೆಸುತ್ತಿದ್ದವರಿಗೆ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಸಮಯವಕಾಶ ನೀಡಿ ಆರು ಗೂಡಂಗಡಿ ತೆರವುಗೊಳಿಸಲಾಗಿದೆ. ಪಾದಚಾರಿಗಳ ಹಿತದೃಷ್ಟಿಯಿಮದ ತೆರವು ಕಾರ್ಯಕೈಗೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
|| ನಗರದ ಪುಟ್ಪಾತ್ ಮಾರ್ಗಗಳು ಪಾದಚಾರಿಗಳಿಗಾಗಿ ಬಳಕೆಯಾಗುವಂತೆ ಪರಿಪೂರ್ಣವಾಗಿ ನಿರ್ಮಿಸಬೇಕು. ಅತಿಕ್ರಮ ಮಾಡುವವರ ವಿರುದ್ಧ ಕೂಡಲೆ ಅಧಿಕಾರಿಗಳು ಕ್ರಮಕೈಗೊಂಡರೆ ಬೀದಿ ವ್ಯಾಪಾರಿಗಳಿಗಾಗುವ ನಷ್ಟ ತಡೆಯಬಹುದು. ಪುಟ್ಪಾತ್ ಅತಿಕ್ರಮಿಸುವವರಿಗೆ ದಂಡ ವಿಧಿಸುವ ಸೂಚನಾ ಫಲಕಗಳು ಕಣ್ಣಿಗೆ ರಾಚುವಂತೆ ಹಾಕಬೇಕು. ಪಾದಚಾರಿಗಳ ಮಾರ್ಗಗಳು ಜನರ ಜೀವ ರಕ್ಷಕಗಳೆಂದು ತಿಳಿಯಬೇಕು.||
ಮಹ್ಮದ್ ಸಾಬ್, ವ್ಯಾಪಾರಿ, ಹೊಸಪೇಟೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ