March 15, 2025

Hampi times

Kannada News Portal from Vijayanagara

ಹರಕೆ ಕೋಣ ಕಟುಕರಿಗೆ ಮಾರಾಟ : ಕಾಯ್ದೆ ಉಲ್ಲಂಘನೆ

 

https://youtu.be/NHc6OMSu0K4?si=SI_K4goOPEgwo6h2

 

HAMPI TIMES

ಕೊಪ್ಪಳ: ದುರ್ಗಮ್ಮ ದೇವರಿಗೆ ಹರಕೆ ಬಿಟ್ಟ ಕೋಣವನ್ನು ತಾಲೂಕಿನ ಹಳೆ ಬಂಡಿ ಹರ್ಲಾಪುರ ಗ್ರಾಮದಲ್ಲಿ ಗ್ರಾಮಸ್ಥರು ಗುರುವಾರ ಕಟುಕರಿಗೆ ಮಾರಾಟ ಮಾಡಿದ್ದಾರೆ.

 

ಗ್ರಾಮದ ಕಂಠಿ ದುರ್ಗಮ್ಮನಿಗೆ ಹರಕೆಯಾಗಿ ಕೋಣ ಬಿಡಲಾಗಿದೆ. ತನ್ನನ್ನು ಹೊಡೆಯುವವರನ್ನು ನೆನಪಿನಲ್ಲಿಟ್ಟಕೊಳ್ಳುವ ಕೋಣ ಅವರು ಕಂಡೊಡನೆ ಇರಿಯಲು ತೆರಳುತ್ತದೆ.
ತಿಂಗಳುಗಳಾದರೂ ಮರೆಯುವುದಿಲ್ಲ. ಅವರ ಮನೆ ಮುಂದೆ ಕಾಯುವ ಮೂಲಕ ದ್ವೇಷ ಸಾಧಿಸುತ್ತಿದೆ. ಕೆಲ ದಿನಗಳ ಹಿಂದೆ ಕೋಟಕ್ಕೆ ಹೊಡೆದಿದ್ದ ಅನಿಲ್, ರೋಷನ್, ದೇವರಾಜ ಎಂಬುವರಿಗೆ ನಿತ್ಯ ಕಾಡುತ್ತಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಅದರ ಕಾಲಿಗೆ ಕಬ್ಬಿಣದ ಸರಳು ಹಾಕಿ ಶಿಕ್ಷೆ ನೀಡಿದ್ದರು. ಆದರೂ, ಕೋಣ ದ್ವೇಷ ಮುಂದುವರೆಸಿದೆ.


ಹೀಗಾಗಿ ದೇವಸ್ಥಾನ ಸಮಿತಿ ಹಾಗೂ ಗ್ರಾಮದ ಹಿರಿಯರು 40 ಸಾವಿರ ರೂ.ಗಳಿಗೆ ಕೋಣವನ್ನು ಕಟುಕರಿಗೆ ಮಾರಾಟ ಮಾಡಿದ್ದಾರೆ. ಕೋಣ ಯಾರಿಗೂ ಅಪಾಯ ಮಾಡದಿರಲಿ, ಗ್ರಾಮಸ್ಥರಿಗೆ ತೊಂದರೆಯಾಗದಿರಲಿ ಎಂದು ನಿರ್ಧರಿಸಿ ಮಾರಾಟ ಮಾಡಿದ್ದಾರೆ. ಕಟುಕರಿಗೆ ಮಾರುವ ಮೂಲಕ ಜಾನುವಾರು ಹತ್ಯೆ ಕಾಯ್ದೆ ಉಲ್ಲಂಘಿಸಿದ್ದಾರೆ.

 

 

 

ಜಾಹೀರಾತು
error: Content is protected !!