December 14, 2024

Hampi times

Kannada News Portal from Vijayanagara

ನಗರಸಭೆ ಮುಂಭಾಗ ಶವವಿಟ್ಟು ಪ್ರತಿಭಟನೆ

 

https://youtu.be/NHc6OMSu0K4?si=SI_K4goOPEgwo6h2

ಬೀದಿ ದನ ದಾಳಿ ಮಹಿಳೆ ಸಾವು

  • HAMPI TIMES

ಕೊಪ್ಪಳ: ಬೀದಿ ದ‌ನ ದಾಳಿಯಿಂದ ಮಹಿಳೆ ಮೃತಪಟ್ಟಿದ್ದು, ಆಕ್ರೋಶಗೊಂಡ ವಾಡ್೯ ನಿವಾಸಿಗಳು ಸೋಮವಾರ ಮಧ್ಯಾಹ್ನ ನಗರಸಭೆ ಮುಂಭಾಗ ಮಹಿಳೆ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಭಾನುವಾರ ಸಂಜೆ ನಗರದ 30 ನೇ ವಾಡ್೯‌ ದೇವರಾಜ ಅರಸು ಕಾಲನಿ ನಿವಾಸಿ ರಮೀಜಾ ಬೇಗಂ (44) ಬರ್ಹಿದೆಸೆಗೆ ತೆರಳಿದ್ದಳು. ಈ ವೇಳೆ ಬಿಡಾಡಿ ದನಗಳ ಗುಂಪು ದಾಳಿ ಮಾಡಿದೆ. ಹೊಟ್ಟೆ ಭಾಗಕ್ಕೆ ಬಲವಾಗಿ ಇರಿದಿದ್ದರಿಂದ‌ ಮಹಿಳೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಬಿಡಾಡಿ ದನಗಳ ನಿಯಂತ್ರಣ ಮಾಡದ ಕಾರಣ ಮಹಿಳೆ ಸಾಯುವಂತಾಗಿದೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ನಾಗರಿಕರು ನಗರಸಭೆ ಅಧಿಕಾರಿಗಳ ನಡೆ ಖಂಡಿಸಿ ಧಿಕ್ಕಾರ ಕೂಗಿದರು. ದನಗಳನ್ನು ಗೋಶಾಲೆಗೆ ಬಿಡಬೇಕು. ಅವಘಡದ ಹೊಣೆ ನಗರಸಭೆ ಹೊರಬೇಕು. ಮೃತ ಮಹಿಳೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪೌರಾಯುಕ್ತ ಎಚ್.ಎನ್.ಭಜಕ್ಕನವರ್ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

 

 

ಜಾಹೀರಾತು
error: Content is protected !!