https://youtu.be/NHc6OMSu0K4?si=SI_K4goOPEgwo6h2
HAMPI TIMES
ಕೊಪ್ಪಳ: ಚುನಾವಣೆ ವೇಳೆ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಶಾಸಕರನ್ನು ದೃಷ್ಟಿಯಲ್ಲಿಕೊಂಡು ಇಂಥವರನ್ನು ಬೆಂಬಲಿಸಿ ಎಂದು ಹೇಳಿರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದ ಶಾಸಕ ರಾಘವೇಂದ್ರ ಹಿಟ್ನಾಳ್ ಮನೆಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಸಾಮಾನ್ಯವಾಗಿ ಮಾಜಿ, ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವುದು ಕಡಿಮೆ.
ಹೀಗಾಗಿ ಸಿದ್ದರಾಮಯ್ಯ ಇಂಥವರನ್ನೇ ಬೆಂಬಲಿಸಿ ಎಂದು ಹೇಳಿರಬಹುದು. ಆದರೆ, ಟಿಕೆಟ್ ಅಂತಿಮಗೊಳಿಸುವುದು ಪಕ್ಷದ ಹೈಕಮಾಂಡ್ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಅಹಿಂದ ವರ್ಗ ಟಾರ್ಗೆಟ್ ಮಾಡಿ ಮತದಾರರ ಪಟ್ಟಿ ಡಿಲೀಟ್ ಮಾಡುತ್ತಿದ್ದಾರೆ. ದೊಡ್ಡ ಸ್ಕ್ಯಾಮ್ ನಡೆಯುತ್ತಿದೆ. ನಮ್ಮ ಮತದಾರರನ್ನು ಗುರಿಯಾಗಿಸಿಕೊಂಡು ಡಿಲೀಟ್ ಮಾಡುತ್ತಿದ್ದು, ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಬಿಜೆಪಿ ಎಸ್ಟಿ ಸಮಾವೇಶದಿಂದ ಎಲ್ಲ ಮತಗಳು ಅವರಿಗೆ ಹೋಗುತ್ತವೆ ಎನ್ನುವಂತಿಲ್ಲ. ಯಾರಿಗೆ ಎಷ್ಟು ಮತಗಳು ಬೀಳುತ್ತವೆ ಎಂಬುದಕ್ಕೆ ಚುನಾವಣೆವರೆಗೂ ಕಾಯಬೇಕು. ಬಿಜೆಪಿಯವರು ಅಗ್ನಿಪಥ ಹಾಗೂ ಇನ್ನಿತರ ವಿಷಯಗಳಲ್ಲಿ ಎಷ್ಟು ಅನ್ಯಾಯ ಮಾಡಿದ್ದಾರೆಂದು ಜನರಿಗೆ ತಿಳಿಸುತ್ತೇವೆ ಎಂದರು.
ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಸರದಾರ. ಆತನ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ನಾನು ಬಳಸಿದ ಪದ ಹಾಗೂ ವಿರೋಧಿಗಳ ಪ್ರಶ್ನೆಗೆ ಈಗಾಗಲೇ ಉತ್ತರ ಕೊಟ್ಟಿರುವೆ. ಅದು ಮುಗಿದ ಅಧ್ಯಾಯ ಎಂದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ