https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ರಾಜ್ಯದ 8 ಜಿಲ್ಲೆಯಲ್ಲಿ 100 ಮಠಗಳನ್ನು, 80 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲಾ ವರ್ಗದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ದಾಸೋಹ ಸೇವೆಯೊಂದಿಗೆ ಧಾರ್ಮಿಕ ಜಾಗೃತಿಯನ್ನು ಮೂಡಿಸಿರುವ ಶ್ರೀಗಳು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಶ್ರೀಗಳ ಪ್ರಥಮ ಪುಣ್ಯಸ್ಮರಣೋತ್ಸವದಂಗವಾಗಿ ನೂರು ಹಾಸಿಗೆ ಆಸ್ಪತ್ರೆಯ ಮುಂದಿನ ರಸ್ತೆಗೆ ಶ್ರೀ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡಿರುವುದು ಶ್ರೀಗಳ ಸೇವಾ ಕೈಂಕರ್ಯಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ವಿಜಯನಗರ ಕಾಲೇಜಿನ ಬಳಿ ಸೋಮವಾರ ಜರುಗಿದ ಶ್ರೀ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳ ರಸ್ತೆ ನಾಮಕರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಡೀ ವೀರಶೈವ ಲಿಂಗಾಯತ ಸಮಾಜದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಕ್ರಾಂತಿ ಮಾಡಿ, ಸಮಸ್ತ ವೀರಶೈವ ಲಿಂಗಾಯತರಲ್ಲಿ ಜಾಗೃತಿಯುಂಟು ಮಾಡಿರುವ ಕೊಟ್ಟೂರು ಸಂಸ್ಥಾನದ ಮಠದ ಲಿಂಗೈಕ್ಯ ಶ್ರೀ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳ ಹೆಸರನ್ನು ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡಿರುವುದು ಭಕ್ತರಲ್ಲಿ ಹರ್ಷ ತಂದಿದೆ. ಡಾ.ಸಂಗನಬಸವ ಮಹಾಸ್ವಾಮಿಗಳು ಎಲ್ಲಾ ವರ್ಗದ ಜನರನ್ನು ಹಾಗೂ ಎಲ್ಲಾ ಭಾಷಿಕರನ್ನು ಒಳಗೊಂಡು ಸರ್ವ ಧರ್ಮಗಳ ಗುರುಗಳಾಗಿದ್ದರು. ಜಗತ್ತಿನಲ್ಲಿ ಎಲ್ಲೂ ಕಾಣದ ಸಾಮರಸ್ಯ ಐಕ್ಯತೆಯ ಪ್ರತೀಕವಾಗಿ ಸರ್ವಧರ್ಮಗಳ ಗ್ರಂಥಗಳಿಟ್ಟು ರಥೋತ್ಸವ ಮಾಡಿದ ಮಹಾಮಹಿಮರು. ಬಸವಪುರಾಣ, ಕೆರೆಗಳ ಶುಭ್ರಗೊಳಿಸುವುದು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಗೆ ಮುಂಚೂಣಿಯಲ್ಲಿರುತ್ತಿದ್ದರು. ಶ್ರೀಗಳ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ನಗರಸಭೆ ಆಡಳಿತ ಮಂಡಳಿ, ಪ್ರವಾಸೋದ್ಯಮ ಸಚಿವ ಆನಂದಸಿAಗ್ ಸೇರಿದಂತೆ ಅನೇಕರು ಶ್ರೀಗಳ ಹೆಸರನ್ನು ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡಿರುವುದು ಉತ್ತಮ ಕಾರ್ಯವಾಗಿದೆ. ನಗರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದರು.
ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮತ್ತು ನಗರಸಭೆ ಅಧ್ಯಕ್ಷೆ ಸುಂಕಮ್ಮ ಶ್ರೀಗಳ ಹೆಸರಿನ ರಸ್ತೆ ನಾಮಫಲಕವನ್ನು ಉದ್ಘಾಟಿಸಿದರು. ಶಾಖಾ ಮಠಗಳ ಶ್ರೀಗಳು, ಉಪಾಧ್ಯಕ್ಷ ಎಲ್.ಎಸ್.ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸದಸ್ಯರಾದ ಹೆಚ್.ಕೆ.ಮಂಜುನಾಥ, ಹೆಚ್.ಶಕುಂತಲಾ, ಕಿರಣ್ ಶಂಕ್ರಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹೆಚ್.ವಿ.ಶರಣಸ್ವಾಮಿ ಕಾರ್ಯದರ್ಶಿ ಕೆ.ರವಿಶಂಕರ, ಸಮಾಜದ ಹಿರಿಯ ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ಕೆ.ಗಂಗಾಧರ, ಆರ್.ಪಿ.ಪ್ರಕಾಶ, ಎಲ್.ಬಸವರಾಜ, ಅಶ್ವಿನ್ ಕೋತಂಬ್ರಿ, ಕೋರಿಶೆಟ್ಟಿ ಲಿಂಗಪ್ಪ, ಜಾಲಿ ಪ್ರಕಾಶ, ಬಿ.ಎಂ.ಸೋಮಶೇಖರ, ಎಸ್.ಎಂ.ಕಾಶಿನಾಥ, ಡಾ.ಎಂ.ಧರ್ಮನಗೌಡ, ಯುವ ಮುಖಂಡ ಸಂದೀಪ್‌ಸಿAಗ್, ವೀರಬಸವರಾಜ ಸೇರಿದಂತೆ ಅನೇಕರು ಇದ್ದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ