November 7, 2024

Hampi times

Kannada News Portal from Vijayanagara

ಮತದಾರರ ಪಟ್ಟಿಯಲ್ಲಿ ಭಾರಿ ವ್ಯತ್ಯಾಸ : ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ

 

https://youtu.be/NHc6OMSu0K4?si=SI_K4goOPEgwo6h2

 

 

HAMPI TIMES

ಕೊಪ್ಪಳ: ಮತದಾರರ ಪರಿಷ್ಕರಣೆ ಪಟ್ಟಿಯಲ್ಲಿ ಜಿಲ್ಲೆಯಲ್ಲಿಯೂ ವ್ಯತ್ಯಾಸ ಕಂಡು ಬಂದಿದ್ದು, ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ತಂಡದಿಂದಲೇ ಮತದಾರರ ಪಟ್ಟಿ ಪರಿಶೀಲನೆ ಮಾಡಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ವನಬಳ್ಳಾರಿಯಲ್ಲಿ ಭಾನುವಾರ ಸುದ್ದಿಗಾರರ ಜತರ ಮಾತನಾಡಿದರು. ಬೆಂಗಳೂರಿನಲ್ಲಿ ಆದ ದತ್ತಾಂಶ ಮಾರಾಟದ ಪ್ರಕರಣ ಜಿಲ್ಲೆಯಲ್ಲಿಯೂ ಆಗಿದೆ. ಕನಕಗಿರಿ ಕ್ಷೇತ್ರವೊಂದರಲ್ಲಿಯೇ 8,000 ರಿಂದ 9,000 ಮತದಾರರ ವ್ಯತ್ಯಾಸ ಕಂಡುಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಈ ದೊಡ್ಡ ಅವಮಾನದಲ್ಲಿ ಬಿಜೆಪಿ ದೊಡ್ಡ ಪಾಲು ಹೊಂದಿದೆ. ಆದ್ದರಿಂದ ಜಿಲ್ಲಾ ಚುನಾವಣಾಧಿಕಾರಿಯಿಂದ ಮತದಾರರ ಪಟ್ಟಿ ತರಿಸಿಕೊಂಡಿದ್ದು, ಅದನ್ನು ತಳಹಂತದಿಂದ ಪರಿಶೀಲನೆ ಮಾಡಲಾಗುವುದು ಎಂದರು.

ದಡೆಸ್ಗೂರೆಗೆ ನಿದ್ದೆ ಬರತಿಲ್ಲ: ಜಿಲ್ಲೆಯ ಕಾರಟಗಿಯಲ್ಲಿ ಈಚೆಗೆ ಮಾಡಿದ ಪಾದಯಾತ್ರೆಗೆ ಸಿಕ್ಕ ಜನಬೆಂಬಲ ನೋಡಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಹೆದರಿದ್ದಾರೆ. ಅವರಿಗೆ ನಿದ್ದೆಯೇ ಬರುತ್ತಿಲ್ಲ ಎಂದು ತಂಗಡಗಿ ಟೀಕಿಸಿದರು. ಅನುಮತಿ ಪಡೆದು ಪಾದಯಾತ್ರೆ ಮಾಡಿದ್ದರೂ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಅಧಿಕಾರಿಗಳು ಎರಡು ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳ ಮೇಲೆ ನಾವೂ ಕೇಸ್‌ ಹಾಕುತ್ತೇವೆ ಎಂದು ಕಿಡಿಕಾರಿದರು.

 

 

ಜಾಹೀರಾತು
error: Content is protected !!