December 14, 2024

Hampi times

Kannada News Portal from Vijayanagara

ಅಹಿಂದ ವರ್ಗ ಟಾರ್ಗೆಟ್ : ಬಿಜೆಪಿ ವಿರುದ್ಧ ಸಿದ್ದು ಕಿಡಿ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಕೊಪ್ಪಳ: ಯಾರು ತಮಗೆ ಮತ ಹಾಕುವುದಿಲ್ಲವೋ ಅಂತವರನ್ನ ಮತದಾರ ಪಟ್ಟಿಯಿಂದ ಕೈ ಬಿಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಅದರಲ್ಲಿಯೂ ಅಹಿಂದ ವರ್ಗದವರನ್ನು ಟಾರ್ಗೆಟ್ ಮಾಡಿ ಈ ಕೆಲಸ ಮಾಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು‌.
ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು. ಮತದಾರರನ್ನು ವಂಚಿಸುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲ ಬಿಜೆಪಿಯ ಕುತಂತ್ರದ ಕೆಲಸವಾಗಿದೆ.
ಚಿಲುಮೆ ಸಂಸ್ಥೆಯಡಿ ಇದು ನಡೆದಿದೆ. ಎಸ್ಸಿ, ಎಸ್ಟಿ, ಮುಸ್ಲಿಂ ಸೇರಿದಂತೆ ಇನ್ನೀತರೆ ವರ್ಗಗಳನ್ನು ಗುರಿಯಾಗಿಸಿ, ಬೇಕಂತ ಅವರನ್ನು ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಸರಿಯಲ್ಲ, ವೋಟ್ ಹಾಕಲ್ಲ ಅಂತ ಗೊತ್ತಾದ ಮೇಲೆ ಡಿಲಿಟ್ ಮಾಡ್ತಿದ್ದಾರೆ. ಇದನ್ನು ನ್ಯಾಯಾಂಗ ತನಿಖೆಗೆ ಕೂಡಲೇ ಒಪ್ಪಿಸಬೇಕು.  ಸಚಿವ ಶ್ರೀರಾಮುಲು ಒಬ್ಬ ಪೆದ್ದ. ಹೀಗಾಗಿ ಬಾಯಿಗೆ ಬಂದಂತೆ ಏನೆನೋ ಮಾತನಾಡುತ್ತಿದ್ದಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

 

ಜಾಹೀರಾತು
error: Content is protected !!