https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ಬಣಜಿಗ ಸಮಾಜ ಹಾಗೂ ಬಣಜಿಗರ ವೃತ್ತಿಯ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ತಾಲೂಕು ಘಟಕ ಪ್ರತಿಭಟಿಸಿ ತಹಶೀಲ್ದಾರ್ ಗೆ ಬುಧವಾರ ಮನವಿ ಸಲ್ಲಿಸಿತು.
ಸಂಘದ ತಾಲೂಕು ಅಧ್ಯಕ್ಷ ಅಕ್ಕಿ ದೊಡ್ಡಬಸವರಾಜ್ ಮಾತನಾಡಿ, ಬಣಜಿಗ ಸಮಾಜ ಹಾಗೂ ವೃತ್ತಿಯ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮತ್ತು ವ್ಯಂಗ್ಯವಾಗಿ ಮಾತನಾಡುವ ಮೂಲಕ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಪಂಚಮಸಾಲಿಯವರಿಗೆ 2ಎ ಮೀಸಲಾತಿ ಹೋರಾಟಕ್ಕೆ ಬಣಜಿಗ ಸಮಾಜ ಬೆಂಬಲ ಹಾಗೂ ಸಂಪೂರ್ಣ ಸಹಕಾರ ನೀಡಿದೆ. ಯಾವುದೇ ಸಮಾಜದ ವಿರುದ್ಧ ಬಣಜಿಗ ಸಮಾಜವಿಲ್ಲ ಎಂದರು.
ಬಣಜಿಗ ಸಮಾಜದ ಗೌರವ ಅಧ್ಯಕ್ಷ ಜವಳಿ ಕಲ್ಮಟ್ಟಪ್ಪ, ಸಮಾಜದ ಹಿರಿಯ ಮುಖಂಡರಾದ ಕೋರಿಶೆಟ್ಟೆ ಲಿಂಗಪ್ಪ, ವಿರುಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಜಾಲಿ , ಸಹ ಕಾರ್ಯದರ್ಶಿ ಕೆ ಚಂದ್ರಶೇಖರ್, ಖಜಾಂಚಿ ಅನ್ನದಾನಪ್ಪ, ನಗರಸಭೆ ಸದಸ್ಯ ಕೆ.ಮಂಜುನಾಥ್ ಸೇರಿದಂತೆ ಸಮಾಜದ ಹಿರಿಯರು, ಕಾರ್ಯಕಾರಿಣಿ ಸದಸ್ಯರು, ಮುಖಂಡರು ಇದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ