July 16, 2025

Hampi times

Kannada News Portal from Vijayanagara

ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ಲೋಕಾಯುಕ್ತರ ವಶಕ್ಕೆ

https://youtu.be/NHc6OMSu0K4?si=SI_K4goOPEgwo6h2

 

HAMPI TIMES
ಬಳ್ಳಾರಿ: ಮಹಾನಗರ ಪಾಲಿಕೆ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್  ನಿವೇಶನ ಖಾತೆ ಫಾರಂ ನಂ.2 ಮತ್ತು 3 ನೀಡಲು ಮಧ್ಯವರ್ತಿ ಮೂಲಕ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ದೂರುದಾರ ಚಿನ್ನದ ವ್ಯಾಪಾರಿ ಕಿರಣ್ ಯಾದವ್ ಕಳೆದ ಎರಡು ತಿಂಗಳಿಂದ ಈವರೆಗೂ ನಿವೇಶನ ಖಾತೆ ಫಾರಂಗಾಗಿ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ ಹಾಗೂ ಕೇಸ್ ವರ್ಕರ್ ಚಿನ್ನಯ್ಯ ಎಂಬುವವರು ಮದ್ಯವರ್ತಿ ಯೂಸೂಫ್ ಎಂಬುವವರ ಮೂಲಕ 80 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು.
ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ದೂರದಾರರೊಂದಿಗೆ ಪಾಲಿಕೆ ಕಚೇರಿಗೆ ದಾಳಿ ಮಾಡಿದಾಗ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ ಮಧ್ಯವರ್ತಿ ಮೂಲಕ 80 ಸಾವಿರ ರೂ. ನಗದು ಪಡೆದುಕೊಂಡಾಗ ಹಣದ ಸಮೇತ ಪಾಲಿಕೆ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್, ಮಧ್ಯವರ್ತಿ ಯುಸೂಫ್ ಇಬ್ಬರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

 

ಜಾಹೀರಾತು
error: Content is protected !!