December 14, 2024

Hampi times

Kannada News Portal from Vijayanagara

ರಾಸುಗಳ ನಿಗೂಢ ಸಾವು: ದನಗಾಯಿಗಳಲ್ಲಿ ಹೆಚ್ಚಿದ ಆತಂಕ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಕೊಪ್ಪಳ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ದನಗಳು ಏಕಾಏಕಿ ಮೃತಪಡುತ್ತಿದ್ದು, ದನಗಾಹಿಗಳಲ್ಲಿ ಆತಂಕ ಮೂಡಿದೆ.  ವೈದ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸತ್ತ ದನಗಳನ್ನು ತಂದ ಮಾಲೀಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ರಾಜ್ಯಾದ್ಯಂತ ಚರ್ಮಗಂಟು ರೋಗ ಜಾನುವಾರುಗಳನ್ನು ಬಾಧಿಸುತ್ತಿದೆ. ಇದಕ್ಕೆ ಲಸಿಕೆ ನೀಡಿರುವ ಪಶು ಪಾಲನಾ ಅಧಿಕಾರಿಗಳು, ಸದ್ಯ ಕಾಲುಬಾಯಿ ರೋಗ ಲಸಿಕಾಕರಣದಲ್ಲಿ ತೊಡಗಿದ್ದಾರೆ. ಇದರ ನಡುವೆ ಕಿನ್ನಾಳ, ಕಾಮನೂರು ಭಾಗದಲ್ಲಿ ಸಂಚಾರಿ ದನಗಳ ಹಿಂಡಿನಲ್ಲಿನ ರಾಸುಗಳು ಸಾಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಿನ್ನಾಳ ಹಾಗೂ ಕಾಮನೂರು ಭಾಗದಲ್ಲಿ ಯಾವೊಂದು ರೋಗ ಲಕ್ಷಣ ಇಲ್ಲದ, ಮೇಯಲು ತೆರಳಿದಲ್ಲೇ ಏಕಾಏಕಿ ಕುಸಿದು ಬಿದ್ದು ಮೃತಪಡುತ್ತಿವೆ. ಕಳೆದೊಂದು ವಾರದಲ್ಲಿ ಸುಮಾರು 15-20 ರಾಸುಗಳು ಪ್ರಾಣ ಬಿಟ್ಟಿವೆ ಎಂದು ದನಗಾಹಿಗಳು ಹೇಳುತ್ತಿದ್ದಾರೆ.

ಹನುಮೇಶಪ್ಪ ಜಂತ್ಲಿ ಎಂಬುವವರು ಮೃತಪಟ್ಟ ರಾಸುಗಳನ್ನು ಆಟೋದಲ್ಲಿ ಹಾಕಿಕೊಂಡು ಜಿಲ್ಲಾಡಳಿತ ಭವನದ ಮುಂದೆ ಹಾಕುತ್ತಲೇ ಸ್ಥಳಕ್ಕೆ ಬಂದ ಪಶುಪಾಲನಾ ಇಲಾಖೆ ಡಿಡಿ ಡಾ.ಎಚ್.ನಾಗರಾಜ ಮತ್ತವರ ತಂಡ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಯಾವ ಕಾರಣಕ್ಕೆ ಜಾನುವಾರುಗಳು ಸಾಯುತ್ತಿವೆ ಎಂಬುದನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಬಳ್ಳಾರಿ ಪ್ರಯೋಗಾಲಯದಿಂದ ತಂತ್ರಜ್ಞರನ್ನು ಕರೆಸಿ ಮೃತ ಜಾನುವಾರುಗಳ ಮರೋಣತ್ತರ ಪರೀಕ್ಷೆ ಕೈಗೊಳ್ಳಲಾಯಿತು.

 

 

ಜಾಹೀರಾತು
error: Content is protected !!