https://youtu.be/NHc6OMSu0K4?si=SI_K4goOPEgwo6h2


HAMPI TIMES
ಕೊಪ್ಪಳ: ಜೀವಂತ ಇರುವ ವ್ಯಕ್ತಿಗೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯೊಬ್ಬರು ಮರಣ ಧೃಢೀಕರಣ ಪ್ರಮಾಣ ಪತ್ರ ನೀಡಿದ ಘಟನೆ ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಗ್ರಾಪಂ ವ್ಯಾಪ್ತಿಯ ಸಂಕನಾಳ ಗ್ರಾಮದ ಮಹಾಂತಪ್ಪ ಎಂಬುವವರು ಜೀವಂತ ಇದ್ದರೂ ದಿವಂಗತರಾಗಿದ್ದಾರೆಂದು ಪ್ರಮಾಣ ಪತ್ರ ನೀಡಲಾಗಿದೆ.


ಈಚೆಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಮಹಾಂತಪ್ಪ ಅವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಮಳೆಹಾನಿ ಪರಿಹಾರ ಪಡೆದುಕೊಳ್ಳುವ ವಿಷಯದಲ್ಲಿ ತಂದೆ ಹಾಗೂ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ, ಸ್ಥಳೀಯ ಮುಖಂಡ ರೊಬ್ಬರು ಹಾಗೂ ಮಕ್ಕಳು ಪಿಡಿಓ ಮೇಲೆ ಒತ್ತಡ ಹಾಕಿ ಮರಣ ದೃಢೀಕರಣ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಈಗ ತಂದೆ ಮತ್ತು ಮಗನ ಮಧ್ಯೆ ಉತ್ತಮ ಸಂಬಂಧ ಬೆಳೆದ ಹಿನ್ನೆಲೆಯಲ್ಲಿ ಈ ಮರಣ ಪ್ರಮಾಣ ಪತ್ರದ ವಿಷಯ ಬೆಳಕಿಗೆ ಬಂದಿದೆ. ಆದರೆ ಇದೇ ಕಾರಣದಿಂದ ಮಹಾಂತಪ್ಪನಿಗೆ ಬರುತ್ತಿದ್ದ ವೃದ್ಯಾಪ್ಯ ವೇತನ ನಿಂತಿದೆ ಎಂದು ಆರೋಪಿಸಲಾಗಿದೆ.ಆದರೆ, ಆಧಾರ್ ಲಿಂಕ್ ಮಾಡಿಸದಿರುವುದು, ಇವರ ಕುಟುಂಬದ ಹೆಸರಿನಲ್ಲಿ ಜಮೀನಿದ್ದು ಏಳು ತಿಂಗಳಹಿಂದೆಯೇ ಮಾಸಾಶನ ಕಡಿತಗೊಂಡಿದೆ. ಈ ಸಂಬಂಧ ಪಿಡಿಒಗೆ ತಾಪಂನಿಂದ ನೋಟಿಸ್ ಜಾರಿ ಮಾಡಲಾಗಿದೆ.




More Stories
ಪೊಲೀಸರ ಸೇವೆ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ
ಹೊಸಪೇಟೆಯಲ್ಲಿ ಗುರುವಂದನಾ ಕಾರ್ಯಕ್ರಮ: ಹಳೇ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಹರ್ಷ
ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ