https://youtu.be/NHc6OMSu0K4?si=SI_K4goOPEgwo6h2
HAMPI TIMES
ಕೊಪ್ಪಳ: ಜಿಲ್ಲಾ ಪೊಲೀಸ್ ಇಲಾಖೆಯಿಂದ 2022-23 ನೇ ಸಾಲಿನ ಅಂಗವಾಗಿ ಶನಿವಾರ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್ ಸಿಬ್ಬಂದಿ ಉತ್ತಮ ಪ್ರದರ್ಶನ ತೋರಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಅವರು, ಶನಿವಾರ ಟಾಸ್ ಮಾಡುವ ಮೂಲಕ ಎರಡನೇ ದಿನದ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.
ಹಲವು ಸಿಬ್ಬಂದಿ ವಿವಿಧ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಪುರುಷರಷ್ಟೆ ಮಹಿಳಾ ಸಿಬ್ಬಂದಿ ಕೂಡ ಕ್ರೀಡಾಕೂಡದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಮಿಂಚಿದರು.
ಪುರುಷ ವಿಭಾಗ: 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕುಷ್ಟಗಿ ವೃತ್ತ ಸಿಎಚ್ ಸಿ ವಿರುಪಾಕ್ಷಪ್ಪ ಪ್ರಥಮ, ಕಾರಟಗಿ ಠಾಣೆಯ ಸಿಪಿಸಿ ಶರಣಪ್ಪ ದ್ವಿತೀಯ, ಗಂಗಾವತಿ ಸಂಚಾರಿ ಠಾಣೆಯ ಸಿಪಿಸಿ ಶಿವರಾಜ ತೃತೀಯ ಸ್ಥಾನ ಪಡೆದರು.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಗಂಗಾವತಿ ನಗರ ಠಾಣೆಯ ಸಿಪಿಸಿ ದುರುಗಪ್ಪ ಪ್ರಥಮ, ಕೊಪ್ಪಳ ಡಿಎಆರ್ ಘಟಕದ ಎಪಿಸಿ ದ್ವಿತೀಯ, ಎಪಿಸಿ ಕನಕಪ್ಪ ತೃತೀಯ ಸ್ಥಾನ ಪಡೆದರು.
800 ಮೀಟರ್ ಓಟದ ಸ್ಪರ್ಧೆಯಲ್ಲಿ ಗಂಗಾವತಿ ನಗರ ಠಾಣೆಯ ಸಿಪಿಸಿ ದುರುಗಪ್ಪ ಪ್ರಥಮ, ಕೊಪ್ಪಳ ಡಿಎಆರ್ ಘಟಕದ ಎಪಿಸಿ ರಮೇಶ ದ್ವಿತೀಯ, ಕನಕಪ್ಪ ತೃತೀಯ ಸ್ಥಾನ ಪಡೆದು ಗಮನ ಸೆಳೆದರು.
1500 ಮೀಟರ್ ಓಟದ ಸ್ಪರ್ಧೆಯಲ್ಲಿ ಡಿಎಆರ್ ಘಟಕದ ಎಪಿಸಿ ರಮೇಶ ಪ್ರಥಮ, ಗಂಗಾವತಿ ನಗರ ಠಾಣೆಯ ಸಿಪಿಸಿ ದುರುಗಪ್ಪ ದ್ವೀತಿಯ, ಕೊಪ್ಪಳ ಡಿಎಆರ್ ಘಟಕದ ಎಪಿಸಿ ಗವಿಸಿದ್ದಪ್ಪ ತೃತೀಯ ಸ್ಥಾನ ಪಡೆದರು.
5ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಕೊಪ್ಪಳ ಡಿಎಆರ್ ಘಟಕದ ಕನಕಪ್ಪ ಪ್ರಥಮ, ರಮೇಶ ದ್ವೀತಿಯ, ಕುಷ್ಟಗಿ ವೃತ್ತ ಕಚೇರಿಯ ಸಿಎಚ್ ಸಿ ವಿರುಪಾಕ್ಷ ತೃತೀಯ ಸ್ಥಾನ ಪಡೆದರು.
ಗುಂಡು ಎಸೆತ ಸ್ಪರ್ಧೆಯಲ್ಲಿ ಬೇವೂರು ಠಾಣೆಯ ರವಿಕುಮಾರ ರಾಥೋಡ ಪ್ರಥಮ, ಕೊಪ್ಪಳ ಡಿಎಆರ್ ಘಟಕದ ಸಾಯಿಬಾಬು ದ್ವೀತಿಯ, ಕೊಪ್ಪಳ ನಗರ ಠಾಣೆಯ ಮದನ್ ತೃತೀಯ.
ಚಕ್ರ ಎಸೆತ ಸ್ಪರ್ಧೆಯಲ್ಲಿ ಬೇವೂರು ಠಾಣೆಯ ರವಿಕುಮಾರ ರಾಥೋಢ ಪ್ರಥಮ, ಕೊಪ್ಪಳ ಡಿಎಆರ್ ಘಟಕದ ವೆಂಕಾರಡ್ಡಿ ದ್ವಿತೀಯ, ಸಾಯಿಬಾಬು ತೃತೀಯ.
ಜಾವಲಿನ್ ಎಸೆತದ ಸ್ಪರ್ಧೆಯಲ್ಲಿ ಬೇವೂರು ಠಾಣೆಯ ರವಿಕುಮಾರ ರಾಥೋಡ ಪ್ರಥಮ, ಕುಷ್ಟಗಿ ಠಾಣೆಯ ಹನುಮಂತ ದ್ವೀತಿಯ, ಕೊಪ್ಪಳ ಡಿ.ಎ.ಆರ್ ಘಟಕದ ಬಸನಗೌಡ ತೃತೀಯ ಸ್ಥಾನ ಪಡೆದರು.
ಉದ್ದ ಜಿಗಿತ ಸ್ಪರ್ಧೆಯಲ್ಲಿ ಕನಕಗಿರಿ ಠಾಣೆಯ ಮೌಲಾಸಾಬ ಪ್ರಥಮ, ಬೇವೂರು ಠಾಣೆಯ ರವಿಕುಮಾರ ದ್ವೀತಿಯ, ಕೊಪ್ಪಳ ಡಿಎಆರ್ ಘಟಕದ ಬಸವರಾಜ ತೃತೀಯ ಸ್ಥಾನ ಪಡೆದರು.
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕೊಪ್ಪಳ ಡಿಎಆರ್ ಘಟಕದ ಪ್ರಸನ್ನಕುಮಾರ ಪ್ರಥಮ, ಕುಷ್ಟಗಿ ಠಾಣೆಯ ಸಂತೋಷ ಕುಮಾರ ದ್ವಿತೀಯ, ಕನಕಗಿರಿ ಠಾಣೆಯ ಮೌಲಾಸಾಬ ತೃತೀಯ ಸ್ಥಾನ ಪಡೆದರು.
ಮಹಿಳಾ ವಿಭಾಗ: 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕೊಪ್ಪಳ ನಿಸ್ತಂತು ಘಟಕದ ಪಾರ್ವತಿ ಪ್ರಥಮ, ಮಲ್ಲವ್ವ ದ್ವಿತೀಯ, ಅಳವಂಡಿ ಠಾಣೆಯ ಬಿಬಿಜಾನ್ ತೃತೀಯ ಸ್ಥಾನ ಪಡೆದರು.
200 ಮೀಟರ್ ಓಟದ ಸ್ಪರ್ಧೆಯಲ್ಲಿ ಅಳವಂಡಿ ಠಾಣೆಯ ಬಿಬಿಜಾನ್ ಪ್ರಥಮ, ತಾವರಗೇರಾ ಠಾಣೆಯ ಸುಮಂಗಲಾ ದ್ವಿತೀಯ, ಕುಷ್ಟಗಿ ಠಾಣೆಯ ದೀಪಾ ತೃತೀಯ.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಅಳವಂಡಿ ಠಾಣೆಯ ಬಿಬಿಜಾನ್ ಪ್ರಥಮ, ಕುಷ್ಟಗಿ ಠಾಣೆಯ ದೀಪಾ ದ್ವಿತೀಯ, ತಾವರಗೇರಾ ಠಾಣೆಯ ಸುಮಂಗಲಾ ತೃತೀಯ.
ಗುಂಡು ಎಸೆತ ಸ್ಪರ್ಧೆಯಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಚೈತ್ರಾ ಪ್ರಥಮ, ಕೊಪ್ಪಳ ನಿಸ್ತಂತು ಘಟಕದ ಸುಮಂಗಲಾ ದ್ವಿತೀಯ, ಕೊಪ್ಪಳ ನಗರ ಠಾಣೆಯ ಜಯಶೀಲಾ ತೃತೀಯ.
ಚಕ್ರ ಎಸೆತ ಸ್ಪರ್ಧೆಯಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಚೈತ್ರಾ ಪ್ರಥಮ, ಕೊಪ್ಪಳ ನಿಸ್ತಂತು ಘಟಕದ ಸುಮಂಗಲಾ ದ್ವಿತೀಯ, ಅಳವಂಡಿ ಠಾಣೆಯಲ್ಲಿ ಬಿಬಿಜಾನ್ ತೃತೀಯ ಸ್ಥಾನ ಪಡೆದರು.
ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಕೊಪ್ಪಳ ನಿಸ್ತಂತು ಘಟಕದ ಸುಮಂಗಲಾ ಪ್ರಥಮ, ಅಳವಂಡಿ ಠಾಣೆಯ ಬಿಬಿಜಾನ್ ದ್ವಿತೀಯ, ಕೊಪ್ಪಳ ಗ್ರಾಮೀಣ ಠಾಣೆಯ ಚೈತ್ರಾ ತೃತೀಯ.
ಉದ್ದ ಜಿಗಿತ ಸ್ಪರ್ಧೆಯಲ್ಲಿ ಕೊಪ್ಪಳ ನಿಸ್ತಂತು ಘಟಕದ ಸುಮಂಗಲಾ ಪ್ರಥಮ, ತಾವರಗೇರಾ ಠಾಣೆಯ ಸುಮಂಗಲಾ ದ್ವಿತೀಯ, ಕುಷ್ಟಗಿ ಠಾಣೆಯ ಶಶಿಕಲಾ ತೃತೀಯ ಸ್ಥಾನ ಪಡೆದರು.
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಅಳವಂಡಿ ಠಾಣೆಯ ಬಿಬಿಜಾನ್ ಪ್ರಥಮ, ಕುಷ್ಠಗಿ ಠಾಣೆಯ ಶಶಿಕಲಾ ದ್ವಿತೀಯ, ತಾವರಗೇರಾ ಠಾಣೆಯ ಸುಮಂಗಲಾ ತೃತೀಯ ಸ್ಥಾನ ಪಡೆದು ಗಮನ ಸೆಳೆದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ