https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ಚಳಿಗಾಳದ ಅಧಿವೇಶನದ ಬಾವಿಗಳಿದು ಜನಪ್ರತಿನಿಧಿಗಳು ಧ್ವನಿ ಎತ್ತುವ ಮುನ್ನವೆ ವೀರಶೈವ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದು ಪ್ರವಾಸೋಧ್ಯಮ ಸಚಿವ ಆನಂದಸಿAಗ್ ಹೇಳಿದರು.
ನಗರದ ಸಹಕಾರಿ ಕ್ರೀಡಾಂಗಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಜಿಲ್ಲಾ ಘಟಕದ ಆಯೋಜಕತ್ವದಲ್ಲಿ ಶನಿವಾರ ಜರುಗಿದ ಕಿತ್ತೂರು ರಾಣಿ ಚನ್ನಮ್ಮನ 199ನೇ ವಿಜಯೋತ್ಸವ ಹಾಗೂ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಅನ್ನ ಕೊಡುವ ಸಮುದಾಯ ಪಂಚಮಸಾಲಿ ಸಮಾಜ. ಸಮುದಾಯದ ಭವಿಷ್ಯದ ಮಕ್ಕಳ ಸರ್ವತೊಮುಖ ಅಭಿವೃದ್ಧಿಗೆ ಮೀಸಲಾತಿ ಹಕ್ಕೊತ್ತಾಯ ನ್ಯಾಯಯುತವಾಗಿದೆ. ಮೀಸಲಾತಿ ಕೇಳುವ ಮುನ್ನವೆ ಸರ್ಕಾರ ಸಮುದಾಯಗಳ ಸ್ಥಿತಿಗತಿಯನ್ನು ಅರಿತು ನೀಡಿದರೆ ಹೋರಾಟಗಳು ತಗ್ಗುತ್ತವೆ. ಮೀಸಲಾತಿ ಸೌಲಭ್ಯ ವಂಚಿತಗೊಂಡ ಪ್ರತಿಭಾವಂತ ಮಕ್ಕಳ ಆತ್ಮಸ್ಥೈರ್ಯ ಕುಸಿಯದಂತೆ ಸರ್ಕಾರಗಳು ಶೀಘ್ರ ತೀರ್ಮಾನ ಕೈಗೊಳ್ಳಬೇಕು. ರೋಮ್ ನಂತರ ಅತಿದೊಡ್ಡ ಸಾಮ್ರಾಜ್ಯವೆಂದರೆ ಅದುವೇ ವಿಜಯನಗರ ಸಾಮ್ರಾಜ್ಯ. ಹಂಪಿಯ ಪುಣ್ಯಭೂಮಿಯಿಂದ ಆರಂಭಿಸಿದ ಪಂಚಮಸಾಲಿ ಹೋರಾಟಕ್ಕೆ ವಿಜಯ ಖಚಿತ ಮತ್ತು ನಿಶ್ಚಿತ. ನಾನೇನು ಪ್ರಭಾವಿ ನಾಯಕನಲ್ಲ. ಮಾನವೀಯ ಗುಣದಿಂದ ಕೆಲಸ ಮಾಡುತ್ತಿದ್ದೇನೆ. ಪಂಚಮಸಾಲಿಗಳ ನ್ಯಾಯಯುತ ಬೇಡಿಕೆಗೆ ನನ್ನ ಬೆಂಬಲವಿದೆ. ಸರ್ಕಾರದ ಮಟ್ಟದಲ್ಲಿ ಈಗಾಗಲೆ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಪರಸ್ಪರ ಸಂಪರ್ಕ ಕೊರತೆಯಿಂದಾಗಿ ವಿಳಂಭವಾಗಿರಬಹುದು. ಅದನ್ನು ಸರಿಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಕಂಚಿನ ಪುತ್ಥಳಿ: ಸ್ವಾತಂತ್ರ್ಯದ ದೀಪ ಹೊತ್ತಿಸಿದ ಮೊದಲ ವೀರರಾಣಿ ಕಿತ್ತೂರು ಚನ್ನಮ್ಮ ಇಡೀ ಸಮಾಜಕ್ಕೆ ಆದರ್ಶ. ನಗರದಲ್ಲಿ ಕಿತ್ತೂರು ಚನ್ನಮ್ಮನ ಕಂಚಿನ ಪುತ್ಥಳಿ ಸ್ಥಾಪಿಸಲಾಗುವುದು. ಪಂಚಮಸಾಲಿ ಭವನ ಮತ್ತು ಉಚಿತ ವಿದ್ಯಾರ್ಥಿ ವಸತಿನಿಲಯಕ್ಕಾಗಿ ಹೊಸಪೇಟೆ ಸುತ್ತಮುತ್ತ 5 ಎಕರೆ ಭೂಮಿ ಸರ್ಕಾರದ ಹಂತದಲ್ಲಿ ಮಂಜೂರು ಮಾಡಬೇಕಾಗಿದ್ದು, ಮಂಜೂರಾತಿಗೆ ಪ್ರಯತ್ನಿಸುತ್ತೇನೆ. ವಿಶ್ವಗುರು ಬಸವಣ್ಣನ ಪುತ್ಥಳಿಯನ್ನು ಹೊಸಪೇಟೆ ನಗರದಲ್ಲಿ ಸ್ಥಾಪಿಸಲು ಸಿದ್ಧತೆ ನಡೆದಿದೆ ಎಂದು ಪ್ರವಾಸೋಧ್ಯಮ ಸಚಿವ ಆನಂದಸಿಂಗ್ ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರಾಣ ಬಿಟ್ಟೇವು ಮೀಸಲಾತಿ ಬಿಡೆವು. ಮೀಸಲಾತಿ ನಮ್ಮ ಹಕ್ಕು. ಪಂಚಮಸಾಲಿಗಳು ಕೃಷಿ ಕುಟುಂಬದವರಾಗಿದ್ದಾರೆ. ಪ್ರತಿಭಾವಂತ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ, ಉದ್ಯೋಗ ಕನಸಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಆದಷ್ಟು ಬೇಗ 2ಎ ಮೀಸಲಾತಿ ಘೊಷಿಸಬೇಕು. ಮೀಸಲಾತಿ ಪಡೆಯುವವರೆಗೆ ಯಾರೂ ವಿರಮಿಸುವಂತಿಲ್ಲ. ಈ ವರ್ಷ ನಡೆಯುವ ಹರ ಜಾತ್ರೆ ಮೀಸಲಾತಿ ಜಾತ್ರೆಯಾಗಬೇಕು. ಈಗಾಗಲೇ ಹಿಂದುಳಿದ ಆಯೋಗ ಕುಲಶಾಸ್ತಿçÃಯ ಅಧ್ಯಯನ ನಡೆಸುತ್ತಿದ್ದು, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರ ಪಂಚಮಸಾಲಿ ಮೀಸಲಾತಿ ಘೋಷಿಸುತ್ತದೆ ಎಂಬ ವಿಶ್ವಾಸ ನೂರಕ್ಕೆ ನೂರರಷ್ಟಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಕೇಂದ್ರದ ಒಬಿಸಿ ಸೌಲಭ್ಯ ಕಲ್ಪಿಸಿ, ಶೇ.29 ರಷ್ಟು ಮೀಸಲಾತಿ ಒದಗಿಸಲು ಸರ್ಕಾರದ ಮಟ್ಟದಲ್ಲಿ ಗಟ್ಟಿ ಧ್ವನಿ ಎತ್ತುವ ಶಾಸಕರು, ಸಂಸದರಿಗೆ ಪಂಚಮಸಾಲಿ ಸಮಾಜ ಬೆಂಬಲಕ್ಕೆ ನಿಲ್ಲುತ್ತದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಾಸಕರ ಗೆಲುವಿನಲ್ಲಿ ಪಂಚಮಸಾಲಿ ಜನರ ಕೊಡುಗೆ ಇದೆ ಎಂದು ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು.
ಸರ್ಕಾರಕ್ಕೆ ಎಚ್ಚರಿಕೆ: ರಾಜ್ಯಧ್ಯಕ್ಷ ಜಿ.ಪಿ.ಪಾಟೀಲ್ ಮಾತನಾಡಿ, ಸರ್ಕಾರ ಮೀಸಲಾತಿ ಘೋಷಣೆಗೆ ವಿಳಂಭ ಮಾಡಿದರೆ 35 ಲಕ್ಷ ಪಂಚಮಸಾಲಿಗಳು ಬೆಂಗಳೂರಿಗೆ ತೆರಳಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮುನ್ನೆಚ್ಚರಿಕೆ ಸಂದೇಶ ರವಾನಿಸಲಾಗುವುದು ಎಂದರು.
2ಎ ಮೀಸಲಾತಿಗೆ ಬೆಂಬಲ: ಶಾಸಕರಾದ ಭೀಮನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ, ಎನ್.ವೈ.ಗೋಪಾಲಕೃಷ್ಣ ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ ಪಂಚಮಸಾಲಿ 2ಎ ಮೀಸಲಾತಿ ದೊರಕಿಸಿಕೊಡಲು ಅಧಿವೇಶನದಲ್ಲಿ ಧ್ವನಿಯಾಗುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಧ್ಯಕ್ಷ ಬಾವಿಬೆಟ್ಟಪ್ಪ, ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಮಾಜಿ ರಾಜ್ಯಧ್ಯಕ್ಷ ಬಸವರಾಜ ದಿಂಡೂರು, ನಿಕಟಪೂರ್ವ ರಾಜ್ಯಧ್ಯಕ್ಷ ಬಿ.ನಾಗನಗೌಡ, ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಮಹಿಳಾ ಘಟಕದ ರಾಜ್ಯಧ್ಯಕ್ಷೆ ಎನ್.ಮಂಗಳಾ ಬಸವರಾಜ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.
ಜಿಲ್ಲಾ ಕಾರ್ಯಾಧ್ಯಕ್ಷ ಅಶ್ವಿನ್ ಕೊತ್ತಂಬರಿ ಸ್ವಾಗತಿಸಿದರು. ಕೆ.ಬಸವರಾಜ್ ಮತ್ತು ಪೂರ್ಣಿಮ ಬಾವಿ ನಿರ್ವಹಿಸಿದರು. ತಾಲೂಕು ಅಧ್ಯಕ್ಷ ಎಂ.ರಾಜಶೇಖರ ವಂದಿಸಿದರು.
ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವದ ಮೆರವಣಿಗೆಗೆ ಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು. ವೀರರಾಣಿ ಕಿತ್ತೂರು ಚನ್ನಮ್ಮನ ವೇಷದಲ್ಲಿ ಇಬ್ಬರು ಬಾಲಕೀಯರು ಎಲ್ಲರ ಗಮನ ಸೆಳೆದರು. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳಿಂದ ಮತ್ತು ಕೊಪ್ಪಳ, ಬಳ್ಳಾರಿ ಜಿಲ್ಲೆಯ 20ಕ್ಕೂ ಅಧಿಕ ಕಲಾತಂಡಗಳು, 1200ಕ್ಕೂ ಅಧಿಕ ಮಹಿಳೆಯರು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ