https://youtu.be/NHc6OMSu0K4?si=SI_K4goOPEgwo6h2
ಪಿ.ಡಿ.ಐ.ಟಿಯಲ್ಲಿ ವಿ.ಟಿ.ಯು ಕಲಬುರ್ಗಿ ವಿಭಾಗಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿ
HAMPI TIMES
ಹೊಸಪೇಟೆ: ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ವಿ.ಟಿ.ಯು ಕಲಬುರ್ಗಿ ವಿಭಾಗಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ 15 ತಂಡಗಳು ಭಾಗವಹಿಸಿದ್ದರು.
ಟೇಬಲ್ ಟೆನ್ನಿಸ್ ಪುರುಷರ ವಿಭಾಗದಲ್ಲಿ ಕಲ್ಬುರ್ಗಿಯ ಪಿ.ಡಿ.ಎ ಕಾಲೇಜಿನ ವಿದ್ಯಾರ್ಥಿಗಳ ತಂಡ 3-2 ಅಂತರದಿಂದ ರೋಚಕ ಜಯಗಳಿಸಿತು. ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿಯೂ ಕಲ್ಬುರ್ಗಿಯ ಪಿ.ಡಿ.ಎ ಕಾಲೇಜಿನ ವಿದ್ಯಾರ್ಥಿನಿಯರು 3-0 ಅಂತರದಿಂದ ಜಯ ಸಾಧಿಸಿದರು. ಬಳ್ಳಾರಿಯ ಬಿ.ಐ.ಟಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಪಂದ್ಯಾವಳಿಯಲ್ಲಿ ಕಲ್ಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಮುಧೋಳ ಹಾಗೂ ಹೊಸಪೇಟೆಯ ಕಾಲೇಜಿನ ಪುರುಷರ 8 ತಂಡಗಳು ಹಾಗೂ ಮಹಿಳೆಯರ 7 ತಂಡಗಳು ಭಾಗವಹಿಸಿದ್ದವು.
ರಾಷ್ಟ್ರೀಯ ಟೆನ್ನಿಸ್ ಆಟಗಾರ ಗಾಳಿ ಶಿವಕುಮಾರ, ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷ ಅಸುಂಡಿ ನಾಗರಾಜ್ ಹಾಗೂ ಕಲ್ಬುರ್ಗಿಯ ಪಿ.ಡಿ.ಎ. ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಎಸ್.ಆರ್. ತೊಲೆ ಉಪಸ್ಥಿತರಿದ್ದರು ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ.ಯು.ಎಂ. ರೋಹಿತ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಕೆ.ಎಸ್.ಮಂಜುನಾಥ ನೀರೂಪಿಸಿದರು, ಕು. ಶ್ರಾವಣಿ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ವಿನಯ್ ಸ್ವಾಗತಿಸಿದರು. ಪ್ರೊ. ಮಧ್ವರಾಜ್ ವಂದಿಸಿದರು. ವಿವಿಧ ವಿಭಾಗದ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.
More Stories
ವಿಭಾಗಮಟ್ಟದ ದಸರಾ ಕ್ರೀಡಾಕೂಟ: ಖೋಖೋ, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡಬಾಲ್ ಸ್ಪರ್ಧೆಗಳಿಗೆ ಚಾಲನೆ
ವಿಭಾಗಮಟ್ಟದ ಥ್ರೋಬಾಲ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮ ಅ.09ಕ್ಕೆ
VSKUB ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಸನ್-1