https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ಜ್ಞಾನದ ಸಂಪಾದನೆ ಹಾಗೂ ಸನ್ಮಾರ್ಗದಲ್ಲಿ ಸಾಗಲು ಮೊಬೈಲ್ ಬಳಕೆಗಿಂತ ಪುಸ್ತಕ ಓದಿಗೆ ವಿದ್ಯಾರ್ಥಿಗಳು ಹೆಚ್ಚು ಅಧ್ಯತೆ ನೀಡಬೇಕು ಎಂದು ಪಿಎಸ್‌ಐ ಎಸ್.ಪಿ.ನಾಯಕ ಹೇಳಿದರು.
ನಗರದ ದೀಪಾಯನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ದೀಪಾಯನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೈಬರ್ ಜಾಗೃತಾ ದಿವಸ್ ಆಚರಣೆಯಲ್ಲಿ ಮಾತನಾಡಿದರು. ಮೊಬೈಲ್ ಬಳಕೆಯಿಂದಾಗುವ ಅನುಕೂಲ ಮತ್ತು ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಪಾಲಕರು ಅರಿವು ಮೂಡಿಸಬೇಕು. ಅತಿಯಾದ ಮೊಬೈಲ್ ಬಳಕೆ ಕ್ರಿಯಾಶೀಲತೆಯನ್ನು ಕಿತ್ತುಕೊಳ್ಳುವ ಸಾಧ್ಯತೆಗಳೆ ಹೆಚ್ಚಿರುತ್ತವೆ. ಅಗತ್ಯಕ್ಕೆ ತಕ್ಕಷ್ಟು ಮತ್ತು ಇತಿಮಿತಿಯಲ್ಲಿ ಮೊಬೈಲ್ ಬಳಕೆ ಇರಬೇಕು. ಮೊಬೈಲ್‌ಗೆ ಬರುವ ಅನಾಮಧೆಯ ವ್ಯಕ್ತಿಗಳಿಂದ ಬರುವ ಮಾಹಿತಿಗಳು, ಲಿಂಕ್‌ಗಳನ್ನು ಒಪನ್ ಮಾಡಬಾರದು. ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್ ಮತ್ತು ಇನ್ಸಾ÷್ಟಗ್ರಾಮ ಬಳಸುವವರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ತಾಲೂಕು ಶಿಕ್ಷಣಾಧಿಕಾರಿ ಚನ್ನಬಸಪ್ಪ ಅಧ್ಯಕ್ಷತೆಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ್ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಅಯ್ಯಪ್ಪ. ದೀಪಾಯನ ಪ್ರೌಢಶಾಲೆಯ ಮುಖ್ಯಗುರು ಕರುಪುಸ್ವಾಮಿ, ಉಪಸ್ಥಿತರಿದ್ದರು. ದೀಪಾಯನ, ಜೆಸೀಸ್, ಸರಕಾರಿ, ಲಯನ್ಸ್ ಹಾಗೂ ವಾಲ್ಮೀಕಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ಮಂಜುಳಾ ಸ್ವಾಗತಿಸಿದರು. ವಿದ್ಯಾರ್ಥಿನಿ ಕುಮಾರಿ ವಿಶೃತಿ ಪ್ರಾರ್ಥಿಸಿದರು. ಶಿಕ್ಷಕರ ಜಂಬುಕೇಶ್ವರ ನಿರ್ವಹಿಸಿದರು. ಶಿಕ್ಷಕ ಮಾಲತೇಶ್ ವಂದಿಸಿದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ