February 10, 2025

Hampi times

Kannada News Portal from Vijayanagara

ದೀಪಾವಳಿ ಇಸ್ಪೀಟ್ ಜೂಜಾಟಗಾರರ ವಿರುದ್ಧ 68 ಪ್ರಕರಣ ದಾಖಲು, 4.24 ಲಕ್ಷ ರೂ ವಶ.

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ದೀಪಾವಳಿ ಹಬ್ಬ ಮಹಿಳೆಯರಿಗೆ ಹಣತೆಗಳ ಬೆಳಕಿನ ಹಬ್ಬವಾದರೆ, ಮಕ್ಕಳಿಗೆ ಪಟಾಕಿ ಹಬ್ಬ ಹಾಗೆ ಪುರುಷರಿಗೆ ಇಸ್ಪೀಟ್ ಹಬ್ಬ ಎಂಬ ಮಾತಿದೆ! ಮೂರು ದಿನದ ದೀಪಾವಳಿ ಸಡಗರದಲ್ಲಿ ಕೆಲವರು ಪಟಾಕಿಗಳಿಂದ ಕೈಸುಟ್ಟುಕೊಂಡರೆ, ಇನ್ನೂ ಕೆಲವರು ಇಸ್ಪೀಟ್ ಜೂಜಾಟದಲ್ಲಿ ಜೇಬು ಸುಟ್ಟುಕೊಳ್ಳುತ್ತಾರೆ. ವಿಜಯನಗರ ಜಿಲ್ಲೆಯ ವ್ಯಾಪ್ತಿಯ ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ಅ.24 ರಿಂದ 26ವರೆಗೆ ಜೂಜಾಟದಲ್ಲಿ ತೊಡಗಿದ 422 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು 4,24,457 ರೂಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಹೊಸಪೇಟೆ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ಗ್ರಾಮೀಣ, ಹಂಪಿ ಪ್ರವಾಸಿ, ಟಿ.ಬಿ.ಡ್ಯಾಂ, ಕಮಲಾಪುರ, ಹಂಪಿ, ಹೊಸಪೇಟೆ ಪಟ್ಟಣ ಠಾಣಾ ವ್ಯಾಪ್ತಿಲ್ಲಿ 117 ಆರೋಪಿತರ ವಿರುದ್ಧ ಒಟ್ಟು 20 ಪ್ರಕರಣಗಳು ದಾಖಲಿಸಿ 1,84,767 ರೂ.ವಶಪಡಿಸಿಕೊಳ್ಳಲಾಗಿದೆ.

ಕೂಡ್ಲಿಗಿ ಉಪ ವಿಭಾಗದ ವ್ಯಾಪ್ತಿಯ ಕೂಡ್ಲಿಗಿ, ಕೊಟ್ಟೂರು, ಎಂ.ಎಂ.ಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 244 ಆರೋಪಿತರ ವಿರುದ್ಧ 37 ಪ್ರಕರಣ ದಾಖಲಿಸಿ 1,97,410 ರೂ ವಶಕ್ಕೆ ಪಡೆಯಲಾಗಿದೆ.

ಹರಪನಹಳ್ಳಿ ಉಪ ವಿಭಾಗ ವ್ಯಾಪ್ತಿಯ ಹರಪನಹಳ್ಳಿ, ಹಲವಾಗಲು, ಅರಸಿಕೇರೆ, ಹಡಗಲಿ, ಹಿರೇ ಹಡಗಲಿ, ಇಟಗಿ ಠಾಣಾ ವ್ಯಾಪ್ತಿಯಲ್ಲಿ 63 ಜನರ ವಿರುದ್ಧ 11 ಪ್ರಕರಣಗಳು ದಾಖಲಿಸಿ 42,280 ರೂಗಳನ್ನು ವಶಕ್ಕೆ ಪಡೆದು ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಹಾಕಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿಯ ಡಾ.ಕೆ.ಅರುಣ್ ಅವರ ಕಟ್ಟುನಿಟ್ಟಿನ ಕ್ರಮ ಜಿಲ್ಲೆಯ ಸಾಮಾನ್ಯ ಜನರು ದೀಪಾವಳಿಯಲ್ಲಿ ಆರ್ಥಿಕವಾಗಿ ದಿವಾಳಿಯಾಗುವುದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಜಿಲ್ಲೆಯ ಮಹಿಳೆಯರು ಪ್ರಶಂಸಿದ್ದಾರೆ.

 

 

ಜಾಹೀರಾತು
error: Content is protected !!