https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ಯುವ ಕವಿ ವಿಶಾಲ್ ಮ್ಯಾಸರ್ ರಚಿಸಿದ, ನಾಡೋಜ ಪ್ರೋ. ಬರಗೂರು ರಾಮಚಂದ್ರಪ್ಪರವರ ಮುನ್ನುಡಿ ಇರುವ ಮತ್ತು ದುಡಿಮೆ ಪ್ರಕಾಶನ ಬಳ್ಳಾರಿ ಹೊರತಂದ ‘ಬಟ್ಟೆಗಂಟಿದ ಬೆಂಕಿ’ ಕೃತಿ ಅ.29 ರಂದು ಶನಿವಾರ ಮಧ್ಯಾಹ್ನ 2.30ಕ್ಕೆ ನಗರದ ಸಂಡೂರು ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಬಿಡುಗಡೆಗೊಳ್ಳಲಿದೆ.
ಖ್ಯಾತ ಕಥೆಗಾರ ಕಲಬುರ್ಗಿಯ ಮಹಾಂತೇಶ್ ನವಲಕಲ್ ಬೃಹನ್ಮಠ ಕೃತಿ ಬಿಡುಗಡೆ ಮಾಡಲಿದ್ದಾರೆ. ಮರಿಯಮ್ಮನಹಳ್ಳಿ ಸಂಸ್ಕೃತಿ ಚಿಂತಕ ಎಸ್.ಬಿ.ಚಂದ್ರಶೇಖರ್ ಅಧ್ಯಕ್ಷತೆವಹಿಸುವರು. ಕವಿ ಡಾ.ಆರನಕಟ್ಟೆ ರಂಗನಾಥ ಸಂಕಲನದ ಕುರಿತು ಮಾತನಾಡಲಿದ್ದಾರೆ. ಅಂಬೇಡ್ಕರ್ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಉಮಾಪತಿ ಪದ್ಮನಾಭನ್, ಕರ್ನಾಟಕ ರಾಜ್ಯ ಪಜಾ/ಪಪಂ ಸರಕಾರಿ ನೌಕರರ ಸಮನ್ವಯ ಸಮಿತಿ ವಿಜಯನಗರ ಜಿಲ್ಲಾಧ್ಯಕ್ಷ ಜಿ.ಶಿವಕುಮಾರ್, ಸ್ಪೂರ್ತಿ ವೇದಿಕೆಯ ಬಿಸಾಟಿ ತಾಯಪ್ಪ ನಾಯಕ ಉಪಸ್ಥಿತರಿರಲಿದ್ದಾರೆ.
ಕವಿಗೋಷ್ಠಿ:
ಹಿರಿಯ ಕವಿ ಬಿ. ಪೀರ್ ಭಾಷಾ, ಕವಿಗೋಷ್ಠಿಯ ಅಧ್ಯಕ್ಷತೆವಹಿಸುವರು.ಕವಯತ್ರಿ ಟಿ.ಎಂ ಉಷಾರಾಣಿ ಚಾಲನೆ ನೀಡಲಿದ್ದಾರೆ. ಲೇಖಕ ಡಾ. ದಯಾನಂದ್ ಕಿನ್ನಾಳ್, ಕವಿ ಡಾ.ಅಕ್ಕಿ ಬಸವೇಶ್, ವಿಜಯನಗರ ಕ.ಚು.ಸಾ.ಪ,ಜಿಲ್ಲಾಧ್ಯಕ್ಷ ಹಾಲ್ಯಾ ನಾಯಕ್ ಉಪಸ್ಥಿತರಿರಲಿದ್ದಾರೆ.
ಭಾಗವಹಿಸುವ ಕವಿಗಳು: ಬಸಂತ್.ಡಿ, ಶೇಕ್ಷಾವಲಿ, ಕರಿಬಸವರಾಜ್ ಗಂಟಿ, ಪ್ರವೀಣ್ ವಿ.ಸಿ.ಕೆ, ಸಂತೋಷ್ ವೈ.ಕೆ.ಡಿ, ಭಾರತಿ ಮೂಲಿಮನಿ, ರಾಜಪ್ಪ ಬಿ.ಡಿ, ಡಾ.ಯು. ಶ್ರೀನಿವಾಸ್ ಮೂರ್ತಿ, ಎ. ಕೆ ಗೌರಮ್ಮ, ಜಂಬುನಾಥ ಹೆಚ್.ಎಂ. ಗಾಯತ್ರಿ. ಬಿ, ನೂರ್ ಜಹನ್, ಮಹೇಶ್ ಬಳ್ಳಾರಿ, ಕೊಪ್ಪಳ, ವಿ.ಪರಶುರಾಮ್ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಮುಂಗಡ ಬುಕ್ಕಿಂಗ್: ಪುಸ್ತಕದ ಬೆಲೆ 80 ರೂ ಇದ್ದು, ಈಗಾಗಲೇ 200ಕ್ಕು ಹೆಚ್ಚು ಪ್ರತಿಗಳು ಮುಂಗಡ ಬುಕಿಂಗ್ ಆಗಿವೆ, ಪುಸ್ತಕದ ಅಂಚೆ ವೆಚ್ಚ ಉಚಿತ. ಪುಸ್ತಕ. ಕೊಳ್ಳುವವರು +91 6363 612 399 ಗೆ ವಾಟ್ಸಪ್ ಮಾಡಬಹುದು ಎಂದು ಯುವಕವಿ ವಿಶಾಲ್ ಮ್ಯಾಸರ್ ತಿಳಿಸಿದ್ದಾರೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ