December 5, 2024

Hampi times

Kannada News Portal from Vijayanagara

ಮನೆ ಮನೆಗೆ ಕನ್ನಡ ಭಾವುಟ, ಪಂಚರತ್ನ ಅರಿವು ಅಭಿಯಾನ: ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ ಹೇಳಿಕೆ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸು ಹಾಗೂ ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ  ನಿಮಿತ್ತ ವಿಜಯನಗರ ಜಿಲ್ಯಾದ್ಯಂತ ನ.1 ರಿಂದ ಮನೆ ಮನೆಗೆ ಕನ್ನಡ ಬಾವುಟ ಅಭಿಯಾನದ ಜೊತೆ ಪಂಚರತ್ನ ರಥಯಾತ್ರೆಯ ಯೋಜನೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನ್ನಡಿಗರ ಸ್ವಾಭಿಮಾನ ರಕ್ಷಣೆಗಾಗಿ ಕನ್ನಡ ಸಂಘಟನೆಗಳ ಸಹಯೋಗದೊಂದಿಗೆ ಸಾಂಕೇತಿಕವಾಗಿ 1000 ಮನೆಗಳಿಗೆ ಕನ್ನಡ ರಾಜ್ಯೋತ್ಸವ ಭಾವುಟ ನೀಡಲಾಗುವುದು. ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಕೃಷಿ ಕ್ಷೇತ್ರವನ್ನು ಸಮೃದ್ಧಗೊಳಿಸುವುದೆ ಪಂಚರತ್ನ ರಥಯಾತ್ರೆಯ ಮೂಲ ಉದ್ದೇಶವಾಗಿದೆ. ವಸತಿ ರಹಿತರಿಗೆ ಸೂರು, ಶಿಕ್ಷಣಕ್ಕಾಗಿ ಸೌಲಭ್ಯಯುತ ಗುಣಮಟ್ಟದ ಶಾಲೆ ತೆರೆಯುವುದು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಗ್ರಾಮೀಣ ಮಟ್ಟದಲ್ಲೂ ಉದ್ಯೋಗ ಸೃಷ್ಠಿ, ಜನರ ಆರೋಗ್ಯ ರಕ್ಷಣೆಗಾಗಿ ಹೋಬಳಿ ಮಟ್ಟದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ರೈತರು ಬೆಳೆದ ಬೆಳೆಗಳಿಗೆ ಅಂತರಾಷ್ಟಿçÃಯ ಮಾರುಕಟ್ಟೆಯ ಬೆಲೆ ದೊರೆಯುವಂತೆ ಮಾಡುವುದು ಹಾಗೂ ಕೃಷಿ ಪದ್ದತಿಯಲ್ಲಿ ಆಧುನೀಕತೆಯನ್ನು ಅಳವಡಿಸಿಕೊಂಡು ಆರ್ಥಿಕ ಸಂಪನ್ಮೂಲಗಳ ವೃದ್ಧಿಗೊಳಿಸವುದಕ್ಕಾಗಿಯೇ ಪಂಚರತ್ನ ಯೋಜನೆ ರೂಪಿಸಲಾಗಿದೆ.

ವಿಜಯನಗರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾ ಪರಿವಾರಕ್ಕೆ ಬೆಂಬಲವಿದೆ ಎಂಬುದನ್ನು ಈ ಹಿಂದೆ ಈ ಭಾಗದ ಜನತೆ ಸಾಬೀತುಪಡಿಸಿದ್ದಾರೆ. ಪಂಚರತ್ನ ರಥಯಾತ್ರೆ ವಿಜಯನಗರ ಜಿಲ್ಲೆಗೂ ಆಗಮಿಸಲಿದೆ. ಈ ಬಾರಿ ರಾಜ್ಯದ ಜನತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದಲ್ಲಿ ಪಂಚರತ್ನ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದರು.

ವಿಜಯನಗರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯಲು ಅನೇಕರು ಆಕಾಂಕ್ಷಿಗಳಿದ್ದಾರೆ. ಆದರೆ ಇದೂವರೆಗೂ ಯಾರನ್ನು ಜೆಡಿಎಸ್‌ನ ನಿಯೋಜಿತ ಅಭ್ಯರ್ಥಿ ಎಂದು ಘೋಷಿಸಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎಂದರು.
ಜೆಡಿಎಸ್ ತಾಲೂಕಧ್ಯಕ್ಷ ಬಿ.ಎಂ.ಸೋಮಶೇಖರ, ಯುವ ಜನತಾದಳದ ವಿಜಯನಗರ ಜಿಲ್ಲಾಧ್ಯಕ್ಷ ಪ್ರಶಾಂತ ಎಚ್.ಎಂ., ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಕಪಿಲಿ, ಅಲ್ಪಸಂಖ್ಯಾತರ ಘಟಸಕ ತಾಲೂಕಧ್ಯಕ್ಷ ಮೆಹಬೂಬ ಭಾಷ, ರಾಜ್ಯ ಪರಿಷತ್ ಸದಸ್ಯ ಅತೈರಸೂಲ್ ಮುಖಂಡ ರಾಜಾಹುಸೇನ್ ಇದ್ದರು.

 

 

ಜಾಹೀರಾತು
error: Content is protected !!