December 8, 2024

Hampi times

Kannada News Portal from Vijayanagara

ಗೋಧೂಳಿ ಮುಹೂರ್ತದಲ್ಲಿ ನೆರವೇರಿದ ಗೋಪೂಜೆ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ನಗರದ ಐತಿಹಾಸಿಕ ಶ್ರೀ ವಡಕರಾಯ ಸ್ವಾಮಿ ಮತ್ತು ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಬಲಿ ಪಾಡ್ಯಮಿ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ್ ಹಾಗೂ ಬಳ್ಳಾರಿ ಜಿಲ್ಲೆ ಧಾರ್ಮಿಕ ಪರಿಷತ್ತಿನ ಸದಸ್ಯ ಎನ್‌ ಟಿ ರಾಜು ಗೋಪೂಜೆ ನೆರವೇರಿಸಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವ್ಯಾಪ್ತಿಯಡಿ ಬರುವ ವಿಜಯನಗರ ಜಿಲ್ಲೆ ಹೊಸಪೇಟೆಯ ಶ್ರೀ ಗ್ರಾಮ ದೇವತಾ ಊರಮ್ಮ ದೇವಸ್ಥಾನ , ಮರಿಯಮ್ಮನಹಳ್ಳಿ ಶ್ರೀ ಲಕ್ಷೀನಾರಾಯಣ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಏಳು ಹೆಡೆ ನಾಗಪ್ಪ ದೇವಸ್ಥಾನ, ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನ, ಹರಪನಹಳ್ಳಿ ತಾಲ್ಲೂಕಿನ ಉಚ್ಚೆoಗಿದುರ್ಗಾ ಶ್ರೀ ಉತ್ಸವಾoಬ ದೇವಿ  ದೇವಸ್ಥಾನ,  ಹರಪನಹಳ್ಳಿ ತಾಲ್ಲೂಕು ಕೂಲಹಳ್ಳಿ  ಗೋಣಿಬಸವೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ಅರ್ಚಕರು ಸೇರಿದಂತೆ ಭಕ್ತರು ಗೋಪೂಜೆ ನೆರವೇರಿಸಿದರು ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಪ್ರಕಾಶರಾವ್ ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!