February 10, 2025

Hampi times

Kannada News Portal from Vijayanagara

ರಾಣಿ ಚನ್ನಮ್ಮ ಮಹಿಳಾ ಸಬಲೀಕರಣದ ಸಂಕೇತ : ಸಹಾಯಕ ಆಯುಕ್ತ ಸಿದ್ದರಾಮೇಶ್ವರ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ಕಿತ್ತೂರ ರಾಣಿ ಚನ್ನಮ್ಮ ಹುಟ್ಟಿದ ನಾಡಲ್ಲಿ ಹುಟ್ಟಿದ ನಾವುಗಳು ಅದೃಷ್ಟವಂತರು. ರಾಣಿ ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ್ ವಿರುದ್ದ ಹೋರಾಡಿ ಸ್ವಾತಂತ್ರ್ಯದ ದೀಪ ಹೊತ್ತಿಸಿದ್ದಾಳೆ. ಆದರೆ ನಾವು ಇದೀಗ ಯುದ್ದ ಮಾಡಬೇಕಿಲ್ಲ. ವಿವಿಧ ರಂಗಗಳಲ್ಲಿ ತೊಡಗಿಕೊಂಡಿರುವ ನಾವುಗಳು ಚನ್ನಮ್ಮನ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಠದ ಹೇಳಿದರು.

 ನಗರದ ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಸಭಾಂಗಣದಲ್ಲಿ ವಿಜಯನಗರ ಜಿಲ್ಲಾಡಳಿತ, ಹೊಸಪೇಟೆ ನಗರಸಭೆ ಹಾಗೂ ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಸಹಯೋಗದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.  ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಪ್ರಥಮ ಮಹಿಳೆ ಚನ್ನಮ್ಮಾಜಿ ಮಹಿಳಾ ಸಬಲೀಕರಣದ ಸಂಕೇತವಾಗಿದ್ದಾರೆ. ಚನ್ನಮ್ಮನಲ್ಲಿನ ಶೌರ್ಯ, ಸಾಹಸ, ಉತ್ತಮ ಆಡಳಿತ ನೀತಿ ಸೇರಿದಂತೆ ನಾಡಿನ ನೆಲ, ಜಲದ ಬಗ್ಗೆ ಇದ್ದ ಕಾಳಜಿ ಮತ್ತು ಮಾನವೀಯತೆಯ ಗುಣಗಳು ಎಲ್ಲರಿಗೂ ಆದರ್ಶಗಳಾಗಿವೆ. ಚನ್ನಮ್ಮಾಜಿ ಯಾವುದೇ ಒಂದು ವರ್ಗಕ್ಕೆ ಸೀಮಿತಗೊಳ್ಳದೆ ಇಡೀ ಮನುಕುಲಕ್ಕೆ ಸೇರಿದವರು. ಕಿತ್ತೂರುರಾಣಿ ಚೆನ್ನಮ್ಮ ಅವರ ಆದರ್ಶವನ್ನು ನಾವೆರಲ್ಲರೂ ರೂಡಿಸಿಕೊಳ್ಳಬೇಕು. ಮಹಿಳೆಯರನ್ನು ಸಬಲಿಕರಣಗೊಳಿಸಲಿಕ್ಕೆ ನಾವೆಲ್ಲರೂ ಸಹಕರಿಸಬೇಕು. ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿ ಆಶೀರ್ವಚನ ನೀಡುತ್ತಾ, ಮಹಿಳೆ ಪುರುಷರಷ್ಟೆ ಸಮರ್ಥಳಾಗಿದ್ದು, ಮಾನಸಿಕವಾಗಿಯೂ ಸದೃಢರಾಗಿದ್ದಾರೆ. ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಮಹಿಳೆಯರ ಸಾಧನೆ ಅರಿಯಲು ಸಾಧ್ಯ. ಮಹಿಳೆ ಮತ್ತು ಪುರುಷರಲ್ಲಿ ದೈಹಿಕವಾಗಿ ಮಾತ್ರ ವ್ಯತ್ಯಾಸವಿದೆ. ಜವಾಬ್ದಾರಿಗಳನ್ನು ವಹಿಸಿದಾಗ ಮುಂಚೂಣಿಯಲ್ಲಿ ನಿಲ್ಲುವ ಶಕ್ತಿ ಮಹಿಳೆಯಲ್ಲಿದೆ. ಆಚರಣೆಗಳು ಕೇವಲ ಪುಷ್ಪಾರ್ಚನೆ, ಪ್ರಸಾದಕ್ಕೆ ಸೀಮಿತಗೊಳ್ಳಬಾರದು. ಆದರ್ಶಗಳನ್ನು ರೂಢಿಸಿಕೊಂಡು ಸಮಾಜಕ್ಕೆ ಸಾಧ್ಯವಾದಷ್ಟು ಕೊಡುಗೆ ಕೊಟ್ಟಾಗ ಮಾತ್ರ  ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.

ಉಪಸಭಾಪತಿ ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶರಾದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿ, ಸಾಂಕೇತಿಕವಾಗಿ ಜಯಂತ್ಯೋತ್ಸವವನ್ನು ಆಚರಿಸಲಾಯಿತು.  ರಾಣಿ ಚನ್ನಮ್ಮ ಶಾಲೆಯಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಮಠದವರೆಗೆ ಕಲಾತಂಡಗಳೊಂದಿಗೆ ಮೌನ ಮೆರವಣಿಗೆ ನಡಸಲಾಯಿತು.

ತಹಶೀಲ್ದಾರ ವಿಶ್ವಜಿತ್ ಮೆಹತಾ, ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ,  ವೀರಶೈವ ಲಿಂಗಾಯತ ಸಮಾಜದ ತಾಲೂಕಧ್ಯಕ್ಷ ಎಚ್. ಶರಣಸ್ವಾಮಿ, ಕಾರ್ಯದರ್ಶಿ ಕೆ.ರವಿಶಂಕರ, ನಿಕಟಪೂರ್ವ ತಾಲೂಕಧ್ಯಕ್ಷ ಕೆ.ಕೊಟ್ರೇಶ, ಪಂಚಮಸಾಲಿ ಸಮಾಜ ಯವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ, ಪಂಚಮಸಾಲಿ ಜಿಲ್ಲಾ ಘಟಕದ ಕಾರ್ಯಧ್ಯಕ್ಷ ಅಶ್ವಿನ್ ಕೋತಂಬ್ರಿ, ತಾಲೂಕಧ್ಯಕ್ಷ ಎಂ.ರಾಜಶೇಖರ, ತಾ.ಪ್ರಧಾನ ಕಾರ್ಯದರ್ಶಿ ಬಸಾಪುರ ಬಸವರಾಜ, ಪಂಚಮಸಾಲಿ ಸಮಾಜದ ರಾಜ್ಯ  ಮಹಿಳಾ ಘಟಕದ ಕೋಶಾಧಿಕಾರಿ ಶಶಿಕಲಾ ನಾಗರಾಜ,

 

 

ಸಮಾಜದ ಹಿರಿಯ ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಆರ್.ಪಿ.ಪ್ರಕಾಶ, ಗೊಗ್ಗ ಗುರುಬಸವರಾಜ, ಬಿಜೆಪಿ ಜಿಲ್ಲಾ ಅದ್ಯಕ್ಷ ಚನ್ನಬಸವನಗೌಡ ಪಾಟೀಲ್, ಬಿ.ಎಂ.ಸೋಮಶೇಖರ, ಜಾಲಿ ಪ್ರಕಾಶ, ಲಿಂಗಪ್ಪ, ಎಂ.ಧರ್ಮನಗೌಡ, ಶಂಕರ ಮೇಟಿ, ಉಪನ್ಯಾಸಕಿ ಡಾ.ಬಿ.ವಿ.ನಾಗವೇಣಿ ಸೋಸಲೆ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಎನ್.ಎಫ್.ಇಮಾಮ್ ನಿಯಾಜಿ, ರಾಜಶೇಖರ ಹಿಟ್ನಾಳ್, ಸೇರದಂತೆ ಸಮಾಜದ ಅನೇಕ ಮುಖಂಡರು ಇದ್ದರು.

ಬಾಲಕಿ ವೇದಾಶ್ರೀ ಕಿತ್ತೂರು ರಾಣಿ ಚನ್ನಮ್ಮನ ವೇಷಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಕುದುರೆ ಸವಾರಿ ನೋಟ ಎಲ್ಲರ ಗಮನ ಸೆಳೆಯಿತು.

 

 

ಜಾಹೀರಾತು
error: Content is protected !!