December 14, 2024

Hampi times

Kannada News Portal from Vijayanagara

ಟಿಇಟಿ ಪರೀಕ್ಷೆಗೆ ಉಚಿತ ತರಬೇತಿ ಅ.22ರಿಂದ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್

ಹೊಸಪೇಟೆ: ವಿಜಯನಗರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ “ಸ್ಪೂರ್ತಿ-2022” ಯೋಜನೆಯಡಿ ಹೊಸಪೇಟೆ ನಗರದಲ್ಲಿ ವಿದ್ಯಾವಂತ ಯುವಕರಿಗಾಗಿ ಅ.22 ರಿಂದ ಪ್ರತಿ ಶನಿವಾರ(ಕನಿಷ್ಠ 3 ಶನಿವಾರ) ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿಜಯನಗರ ಕಾಲೇಜಿನ ಸಭಾಂಗಣದಲ್ಲಿ TET ಸ್ಪರ್ಧಾತ್ಮಕ ಪರೀಕ್ಷೆಗಾಗಿ ನುರಿತ ತರಬೇತುದಾರರಿಂದ ಉಚಿತ ತರಬೇತಿಯನ್ನು ನೀಡಲಾಗುತ್ತದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ನ ಅಧ್ಯಕ್ಷರಾದ ಅನಿರುದ್ದ್ ಶ್ರವಣ್ ತಿಳಿಸಿದ್ದಾರೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ವಿಜಯನಗರ ಜಿಲ್ಲೆಯಲ್ಲಿನ ಬಿ.ಇಡಿ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ಪ್ರಶಿಕ್ಷಣಾರ್ಥಿಗಳು ಸಹ ಹಾಜರಾಗಿ ತರಬೇತಿಯ ಸದುಪಯೋಗ ಪಡೆಯಲು ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!