December 8, 2024

Hampi times

Kannada News Portal from Vijayanagara

ವೀರಶೈವ ಲಿಂಗಾಯತ ನಿಗಮದಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

 

https://youtu.be/NHc6OMSu0K4?si=SI_K4goOPEgwo6h2

HAMPI TIMES

ಬಳ್ಳಾರಿ: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಇಚ್ಚಿಸುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ವರ್ಗ 3ಬಿ ಗೆ ಸೇರಿದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗಳು: 
ಬಸವ ಬೆಳಗು: ವೃತ್ತಿಪರ ಕೋರ್ಸಗಳಿಗೆ ವಾರ್ಷಿಕ ರೂ.1ಲಕ್ಷಗಳ ಮಿತಿಯಲ್ಲಿ ಗರಿಷ್ಠ ರೂ.5ಲಕ್ಷಗಳ ವರೆಗೆ ಶೇ.2 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ವಿದೇಶಿ ವಿದ್ಯಾವಿಕಾಸ: ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಾರ್ಷಿಕ ಗರಿಷ್ಠ ರೂ. 3.50 ಲಕ್ಷಗಳಂತೆ 3 ವರ್ಷದ ಅವಧಿಗೆ ಒಟ್ಟು ರೂ.10 ಲಕ್ಷಗಳನ್ನು ಶೇ.2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಜೀವಜಲ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಹಾಗೂ ಒಂದೇ ಕಡೆ ಹೊಂದಿಕೊಂಡಿರುವಂತೆ ಕನಿಷ್ಠ 2ಎಕರೆ, ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಫಲಾನುಭವಿಗಳಿಗೆ 2ಲಕ್ಷ ಸಹಾಯಧನ ಹಾಗೂ ರೂ. 50ಸಾವಿರ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು.
ಕಾಯಕಕಿರಣ ಯೋಜನೆ: ವೃತ್ತಿ ಕಸಬುದಾರರು ಹಾಗೂ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ. 1ಲಕ್ಷಗಳವರೆಗೆ ಆರ್ಥಿಕ ನೆರವು, ಇದರಲ್ಲಿ ರೂ.50ಸಾವಿರಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.30ರಷ್ಟು ಗರಿಷ್ಠ ರೂ.10ಸಾವಿರಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ ರೂ.40ಸಾವಿರಗಳನ್ನು ಶೇ.2ರ ಬಡ್ಡಿದರದಲ್ಲಿ ಸಾಲದರೂಪದಲ್ಲಿ ನೀಡಲಾಗುತ್ತದೆ. ರೂ.50ಸಾವಿರದಿಂದ ಲಕ್ಷದವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.20ರಷ್ಟು ಗರಿಷ್ಠ ರೂ.20ಸಾವಿರಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ ರೂ.80ಸಾವಿರಗಳನ್ನು ಶೇ.2ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ಯೋಜನೆ: ವೀರಶೈವ ಲಿಂಗಾಯತ ಸಮುದಾಯದ ಸ್ವ-ಸಹಾಯ ಗುಂಪುಗಳ ಗರಿಷ್ಠ 15 ಸದಸ್ಯರಿಗೆ ತಲಾ ರೂ.5ಸಾವಿರಗಳ ಸಹಾಯಧನ ಹಾಗೂ ರೂ.10ಸಾವಿರಗಳ ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ಪ್ರತಿ ಗುಂಪಿಗೆ ರೂ.75ಸಾವಿರಗಳ ಸಹಾಯಧನ ಹಾಗೂ ರೂ.1.50ಲಕ್ಷಗಳ ಸಾಲ ಒಟ್ಟು ರೂ.2.25ಲಕ್ಷಗಳನ್ನು ನೀಡಲಾಗುವುದು.
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನವೆಂಬರ್ 30ರೊಳಗಾಗಿ ನಗರದ ಶ್ರೀ ಕುಮಾರಸ್ವಾಮಿ ಎದುರುಗಡೆ ಕ್ಲಬ್ ರಸ್ತೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್ ಸೈಟ್https://kvldcl.karnataka.gov.in ಅಥವಾ ಸಹಾಯವಾಣಿ ಸಂಖ್ಯೆ:08372-232327 ಹಾಗೂ 080-22865522ಗೆ ಸಂಪರ್ಕಿಸಬಹುದು.

 

 

ಜಾಹೀರಾತು
error: Content is protected !!