December 14, 2024

Hampi times

Kannada News Portal from Vijayanagara

ಸೂರ್ಯಗ್ರಹಣ ನಿಮಿತ್ತ ಹಂಪಿ ವಿರೂಪಾಕ್ಷೇಶ್ವರಸ್ವಾಮಿ ಪೂಜಾ, ದರ್ಶನ ಸಮಯದಲ್ಲಿ ಬದಲಾವಣೆ

ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಒಳ ಆವರಣದ ನೋಟ...

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್
ಹೊಸಪೇಟೆ: ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 25, 2022 ರಂದು ಮಧ್ಯಾಹ್ನ 2 ಗಂಟೆ 28 ನಿಮಿಷದಿಂದ ಸಂಜೆ 6 ಗಂಟೆ 38 ನಿಮಿಷದವರೆಗೆ ಸೂರ್ಯಗ್ರಹಣ ವಿರುವುದರಿಂದ ಅಂದು ನಿತ್ಯದ ಪೂಜಾ ಹಾಗೂ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ

ಸೂರ್ಯಗ್ರಹಣದ ನಿಮಿತ್ತ ಅಂದು ಬೆಳಿಗ್ಗೆ 6.30ಕ್ಕೆ ಬೆಳಗಿನ ಪೂಜೆ, ಬೆಳಿಗ್ಗೆ 9 ಗಂಟೆಗೆ ಮಧ್ಯಾಹ್ನದ ಪೂಜೆ ಮತ್ತು ಬೆಳಿಗ್ಗೆ 10.30 ರಿಂದ ಸಂಜೆಯ ಪೂಜೆ ನೆರವೇರಿಸಲಾಗುತ್ತದೆ. ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಅಕ್ಟೋಬರ್ 26 ಬುಧವಾರ ಎಂದಿನಂತೆ ಪೂಜಾಕಾರ್ಯಗಳು, ದರ್ಶನ ಸಮಯ ಮುಂದುವರೆಯಲಿದೆ ಎಂದು ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!