December 8, 2024

Hampi times

Kannada News Portal from Vijayanagara

ವಿವಿಧ ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ

 

https://youtu.be/NHc6OMSu0K4?si=SI_K4goOPEgwo6h2

ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ 22-ದುಗ್ಗಾವತಿ ಹಾಗೂ ಹಡಗಲಿ ತಾಲೂಕಿನ ಮಾಗಳ ಗ್ರಾಮ ಪಂಚಾಯತಿಗಳ ತಲಾ 01 ಸದಸ್ಯ ಸ್ಥಾನವು ವಿವಿಧ ಕಾರಣಗಳಿಂದ ತೆರವಾಗಿದ್ದು, ಈ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.


ಹರಪನಹಳ್ಳಿ ತಾಲೂಕಿನ 22-ದುಗ್ಗಾವತಿ ಗ್ರಾಮ ಪಂಚಾಯಿತಿಯ 03-ದುಗ್ಗಾವತಿ ಕ್ಷೇತ್ರದ 01 ಸ್ಥಾನಕ್ಕೆ ಹಾಗೂ ಹಡಗಲಿ ತಾಲೂಕಿನ ಮಾಗಳ ಗ್ರಾಮ ಪಂಚಾಯತಿಯ 05-ಮಾಗಳ ಕ್ಷೇತ್ರದ 01 ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಅ.18ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ, ಅ.19ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಉಮೇದುವಾರಿಕೆಯನ್ನು ಹಿಂಪಡೆಯಲು ಅ.21ರಂದು ಕಡೆಯದಿನ. ಮತದಾನವು ಅ.28ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ. ಮತ ಎಣಿಕೆಯು ಅ.31ರಂದು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!